ನ್ಯೂಸ್ ನಾಟೌಟ್:ಬಡವರಿಗಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೃದಯ ಮಿಡಿದಿದೆ.ಹೌದು,ಬಹುಸಂಖ್ಯಾ ಅಭಿಮಾನಿಗಳನ್ನು ಹೊಂದಿರುವ ನಟ ಇದೀಗ ೧೨ ಎಕರೆ ಎಕರೆ ಜಮೀನ್ನಲ್ಲಿ ಆಸ್ಪತ್ರೆ ನಿರ್ಮಿಸಲು ತಲೈವಾ ಮುಂದಾಗಿದ್ದಾರೆ.
ಸದ್ಯ ‘ಲಾಲ್ ಸಲಾಂ’ ಸಿನಿಮಾದ ಬಳಿಕ ‘ವೆಟ್ಟೈಯನ್’ ಸಿನಿಮಾದಲ್ಲಿ ರಜನಿ ಬ್ಯುಸಿಯಾಗಿರುವ ನಟ ಇದೇ ವರ್ಷ ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆಯಾದರೂ ನಟ ರಜನಿಕಾಂತ್ ಬಡವರ ಚಿಕಿತ್ಸೆಗಾಗಿ ಚೆನ್ನೈನಲ್ಲಿ ಆಸ್ಪತ್ರೆ ನಿರ್ಮಿಸುತ್ತಿದ್ದಾರೆ. 12 ಎಕರೆ ಜಮೀನ್ನಲ್ಲಿ ಆಸ್ಪತ್ರೆ ನಿರ್ಮಿಸಲು ತಲೈವಾ ಮುಂದಾಗಿದ್ದಾರೆ.
ಇತ್ತೀಚೆಗೆ ಸೂಪರ್ ಸ್ಟಾರ್ ಚೆನ್ನೈನ ತಿರುಪ್ಪೋರೂರಿನ ರಿಜಿಸ್ಟಾರ್ ಕಚೇರಿ ಭೇಟಿ ಕೊಟ್ಟಿದ್ದರು. ಅಲ್ಲಿ ಹೊಸದಾಗಿ ನಿರ್ಮಿಸಿರುವ ಜಮೀನಿನ ದಾಖಲೆ ಪತ್ರ ಪರಿಶೀಲನೆ ನಡೆಸಿದ್ದರು. ಇನ್ನು ತಿರುಪ್ಪೋರೂರಿಗೆ ತಲೈವಾ ಬರುತ್ತಾರೆಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಸೇರಿದ್ದರು.
ಮಾಹಿತಿಯಂತೆಯೇ, ರಜನಿಕಾಂತ್ ಚೆನ್ನೈನಿಂದ ಒಎಂಆರ್ ರಸ್ತೆಯ ಮೂಲಕ ತಲಂಬೂರಿಗೆ ಹೋಗುವ ಮಾರ್ಗದಲ್ಲಿ ಆಸ್ಪತ್ರೆ ನಿರ್ಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಸುಮಾರು 12 ಎಕರೆ ಜಮೀನಿನಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ.ಸಿನಿಮಾ ವಿಚಾರಕ್ಕೆ ಬರೋದಾದ್ರೆ ಲಾಲ್ ಸಲಾಂ ಸಿನಿಮಾದ ಬಳಿಕ ವೆಟ್ಟೈಯನ್ ಸಿನಿಮಾದಲ್ಲಿ ನಟಿಸುತ್ತಿದ್ದು,ಈ ಸಿನಿಮಾ ಅಂತಿಮ ಹಂತ ತಲುಪಿದೆ. ಹೈದರಾಬಾದ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ರಿತಿಕಾ ಸಿಂಗ್, ರಾಣಾ ದಗ್ಗುಬಾಟಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.