ನ್ಯೂಸ್ ನಾಟೌಟ್ : ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಹಿತ ಸಿದ್ಧಾಂತ ಮತ್ತು ಶಲ್ಯ ತಂತ್ರ ವಿಭಾಗದ ಸಹಯೋಗದಲ್ಲಿ ಅಭಿನವ – 2024″ Pursuit for enlightenment – CME ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ ವಿ ಚಿದಾನಂದ, ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ ಡಿ.ವಿ, ಶಲ್ಯ ತಂತ್ರ ವಿಭಾಗದ ಮುಖ್ಯಸ್ಥ ಡಾ. ಹರ್ಷವರ್ಧನ.ಕೆ, ಸುಖಾಯು ಕ್ಯಾನ್ಸರ್ ಫೌಂಡೇಷನ್, ಉಡುಪಿ ಇದರ ಸಂಸ್ಥಾಪಕ ಡಾ. ಅಶ್ವಥ್ ರಾವ್, ಸಂಹಿತ ಸಿದ್ಧಾಂತ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಉಡುಪ ಹಾಗು ಕಾರ್ಯಕ್ರಮದ ಸಂಯೋಜಕ ಡಾ. ಶ್ರೀರಾಮ್ ಎಂ.ಉಪಸ್ಥಿತರಿದ್ದರು.
ಡಾ.ಕೆ.ವಿ. ಚಿದಾನಂದ ಹಾಗೂ ಇತರ ಗಣ್ಯರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.ಡಾ.ಅಶ್ವಥ್ ” Integrated Medicine – Role of Ayurveda in clinical management ವಿಷಯದ ಬಗ್ಗೆ, ಡಾ. ರಾಘವೇಂದ್ರ “Traditional practice of fracture and dislocation” ವಿಷಯದ ಬಗ್ಗೆ ವಿಧ್ಯಾರ್ಥಿಗಳಿಗೆ ಮಾಹಿತಿ ನೀಡಿದರು .ಕಾರ್ಯಕ್ರಮವನ್ನು ಸಂಯೋಜನಾಧಿಕಾರಿ ಡಾ. ಹರ್ಷವರ್ಧನ ಕೆ.ಸ್ವಾಗತಿಸಿ, ಡಾ. ಶ್ರೀರಾಮ್ ಎಂ.ಇವರು ವಂದಿಸಿದರು. ವಿದ್ಯಾರ್ಥಿಗಳಾದ ಕು. ದೀಕ್ಷಾ ಹಾಗೂ ಕು. ದೀಪ್ತಿ ಕಾರ್ಯಕ್ರಮವನ್ನು ನಿರೂಪಿಸಿ, ಅಕ್ಷಯ ನಾರಾಯಣ ಪ್ರಾರ್ಥಿಸಿದರು.