ನ್ಯೂಸ್ ನಾಟೌಟ್:ಸುಳ್ಯದ ಮೇನಾಲದಲ್ಲಿ ತೀರಾ ದುರವಸ್ಥೆಯಲ್ಲಿದ್ದ ಮನೆಯಲ್ಲಿ ಅನಾರೋಗ್ಯದಲ್ಲಿ ಬಳಲಿಕೊಂಡಿದ್ದ ಮೂವರು ಮಹಿಳೆಯರು ವಾಸಿಸುತ್ತಿದ್ದ ಮನೆಯ ರಿಪೇರಿ ಕೆಲಸಗಳು ಇದೀಗ ಪೂರ್ಣಗೊಂಡಿದೆ.ಈ ಕುಟುಂಬವು ಮನೆ ಇದ್ದೂ ಇಲ್ಲದಂತೆ ಎಂಬ ಪರಿಸ್ಥಿತಿಯಲ್ಲಿತ್ತು.ಇಂತಹ ಕುಟುಂಬವನ್ನು ಗಮನಿಸಿ ಅವರಿಗೆ ನೆರವನ್ನು ನೀಡಲಾಗಿತ್ತು.ಕಳೆದ ನಾಲ್ಕು ವರ್ಷದಿಂದ ಈ ಅಶಕ್ತ ಕುಟುಂಬದ ಲ್ಲಿರುವ ಭಾಗೀರಥಿಯವರಿಗೆ ಪ್ರತಿ ತಿಂಗಳು ಮಾಶಾಸನ ಒದಗಿಸುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಾಡಲಾಗಿತ್ತು.
ಇದರೊಂದಿಗೆ ಪ್ರತಿ ತಿಂಗಳು ಆರೋಗ್ಯಕ್ಕೆ ಪೂರಕವಾಗಿ ಪೌಷ್ಟಿಕಾಂಶವಳ್ಳ ವಾತ್ಸಲ್ಯ ಮಿಲೆಟ್ ಕಿಟ್ ನ್ನು ಕೂಡ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ನೀಡುತ್ತಾ ಬರಲಾಗುತ್ತಿದ್ದು,ವರ್ಷಕ್ಕೆ ಎರಡು ಬಾರಿ ಬಟ್ಟೆ ಹಾಗೂ ಈ ಮನೆಯ ಅಡುಗೆ ಮನೆ ರಿಪೇರಿ , ನೀರಿನ ಟ್ಯಾಂಕ್ ಅಳವಡಿಕೆ, ಮನೆಯ ದುರಸ್ತಿ ಮತ್ತು ಪೈಂಟಿಂಗ್ ಕೆಲಸವನ್ನು ಕ್ಷೇತ್ರದ ವತಿಯಿಂದ ಇದೀಗ ಮಾಡಲಾಗಿದೆ.
ವಾತ್ಸಲ್ಯ ಮನೆ ಯೋಜನೆ ಅಡಿಯಲ್ಲಿ ಮನೆ ರಿಪೇರಿಗೆ ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾ ದಿನವಾದ ಜನವರಿ 22ರಂದು ಚಾಲನೆಗೊಂಡಿತ್ತು.ಇದೀಗ ಮನೆ ರಿಪೇರಿ ಪೂರ್ತಿ ಗೊಂಡಿದ್ದು, ಈ ಕೆಲಸಕ್ಕೆ ಸಂಪೂರ್ಣ ಸಹಕಾರವನ್ನು ಶೌರ್ಯ ವಿಪತ್ತು ಘಟಕ ಮಂಡೆಕೋಲು ಮತ್ತು ಸ್ಥಳೀಯ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾ ಪ್ರತಿನಿಧಿಯವರು, ಕೇಂದ್ರ ಒಕ್ಕೂಟದ ಅಧ್ಯಕ್ಷರು ನೀಡಿದ್ದಾರೆ. ಈ ಕೆಲಸ ಸಂಪೂರ್ಣಗೊಳಿಸುವಂತೆ ಕೈಜೋಡಿಸಿದ್ದಾರೆ.