ನ್ಯೂಸ್ ನಾಟೌಟ್: ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಎನ್.ಎಸ್.ಎಸ್ ಘಟಕದ 46ನೇ ವರ್ಷದ ವಾರ್ಷಿಕ ವಿಶೇಷ ಶಿಬಿರದ ಪ್ರಯುಕ್ತ ಮಾರ್ಚ್ 15 ರಂದು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಂಚಕರ್ಮ ವಿಭಾಗದ ವೈದ್ಯ ಡಾ| ಲಕ್ಷ್ಮೀಶ ಕೆ.ಎಸ್. ಭಾಗವಹಿಸಿದ್ದರು. ಬಳಿಕ ಮಾತನಾಡಿದ ಅವರು ಸಮಾಜದಲ್ಲಿ ಆರೋಗ್ಯವಂತ ಯುವಜನತೆಯ ಪಾತ್ರ ಮತ್ತು ಸ್ವಾಸ್ತ್ಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಪದ್ಮನಾಭ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜನಾಧಿಕಾರಿ ಸಂಜೀವ ಕುದ್ಪಾಜೆ, ವಿನಯ್ ಬೆದ್ರುಪಣೆ, ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಧ್ಯಾಪಕ ವೃಂದದವರು ಮತ್ತು ಯೋಜನಾ ಘಟಕದ ನಾಯಕ, ನಾಯಕಿಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಡಾ| ಸಂತೋಷ್ ನಾಯರ್, ಡಾ| ದೀಪ್ತಿ ಎಸ್, ಡಾ| ನಿರ್ಮಲಾ ಕನಕರಾಜ್, ಡಾ| ಜೀವನ್.ಎಸ್ ಹಾಗೂ ಆಸ್ಪತ್ರೆಯ ಇತರ ಸಿಬ್ಬಂದಿ ಭಾಗವಹಿಸಿದ್ದರು. ಶಿಬಿರಾರ್ಥಿಗಳು ಮತ್ತು ಊರಿನ ಹಲವರು ವೈದ್ಯಕೀಯ ಶಿಬಿರದ ಸದುಪಯೋಗ ಪಡೆದು ಕೊಂಡರು.