ನ್ಯೂಸ್ ನಾಟೌಟ್ : ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ ಮಾಡಲು ಯತ್ನಿಸಿದ ಪ್ರಕರಣವೊಂದು ಸುಳ್ಯದಿಂದ ವರದಿಯಾಗಿತ್ತು. ಮಾ.28ರಂದು ಸುಳ್ಯ ಅರಣ್ಯ ಶಾಖೆಯ ಸುಳ್ಯ ಕಸಬಾ ಗ್ರಾಮದ ಶಾಂತಿನಗರ ಎಂಬಲ್ಲಿ ಈ ಘಟನೆ ನಡೆದಿದ್ದು,ಇದೀಗ ಸುಳ್ಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸೌಮ್ಯ ಪಿ. ಎನ್. ನೇತೃತ್ವದ ತಂಡ ಪತ್ತೆ ಹಚ್ಚಿ ಈ ಪ್ರಕರಣವನ್ನು ದಾಖಲಿಸಿದೆ.
ಇದಕ್ಕೆ ಸಂಬಂಧ ಪಟ್ಟ ಹಾಗೆ ಅಕ್ರಮ ಸಾಗಾಟಕ್ಕೆ ಬಳಸಲಾದ 1 ಲಾರಿ, 1ಕ್ರೇನ್, ಹಾಗೂ 7.946 ಘ. ಮೀ. ಮರದ ದಿಮ್ಮಿ ಸೇರಿದಂತೆ ಆರೋಪಿಗಳಾದ ಸ್ಥಳದ ಮಾಲಿಕ ಕೆ. ಕೃಷ್ಣಪ್ಪ ನಾಯ್ಕ ಶಾಂತಿನಗರ, ಮರದ ವ್ಯಾಪಾರಿ ರಿಫಾಯಿ ಹಳೆಗೇಟು, ಕ್ರೇನ್ ಚಾಲಕ ಗೋಪಾಲಕೃಷ್ಣ ಜಯನಗರ, ಲಾರಿ ಚಾಲಕ ಜಗದೀಶ್ ಶಾಂತಿ ಗ್ರಾಮ, ಹಾಸನ ಇವರನ್ನು ದಸ್ತಗಿರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ವಾಹನ ಮತ್ತು ಸೊತ್ತುಗಳ ಒಟ್ಟು ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಸೌಮ್ಯ. ಪಿ.ಎನ್, ರಾಘವೇಂದ್ರ ಪ್ರಸಾದ್ ಹಾಗೂ ಗಸ್ತು ಅರಣ್ಯ ಪಾಲಕರಾದ ಗೀತಾ, ಪುಷ್ಪಾವತಿ, ನಿಂಗಪ್ಪ ಕೊಪ್ಪ, ವಾಹನ ಚಾಲಕ ಪುರುಷೋತ್ತಮ್ ಭಾಗವಹಿಸಿದ್ದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಟೋನಿ ಎಸ್ ಮರಿಯಪ್ಪ ಇವರ ನಿರ್ದೇಶನ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಮಂಜುನಾಥ ಎನ್. ಅವರು ಮುಂದಿನ ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.