ನ್ಯೂಸ್ ನಾಟೌಟ್ : ನೆಹರೂ ಮೆಮೋರಿಯಲ್ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ಪಿಲಿಕಜೆಯಲ್ಲಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.ಮಾರ್ಚ್ 10ರಿಂದ ಆರಂಭಗೊಂಡ ಈ ವಿಶೇಷ ಶಿಬಿರ ಮಾರ್ಚ್ 16ರರವರೆಗೆ ನಡೆಯಲಿದೆ.
ಅಮರ ಮುಡ್ನೂರು ಗ್ರಾಮದ ಪಿಲಿಕಜೆಯಲ್ಲಿ ನಡೆದ ಎನ್ಎಮ್ಸಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ 46ನೇ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಎ.ಒ.ಎಲ್.ಇ. ಕಾರ್ಯದರ್ಶಿ ಕೆ.ವಿ. ಹೇಮನಾಥ್ ಅವರು “ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಅಮೂಲ್ಯ ಕ್ಷಣವಾಗಿದೆ.ಈ ಸಮಯದಲ್ಲಿ ನಾವು ನಾವು ಹೊಸತನ್ನು ಕಲಿಯುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಇದು ಶಿಬಿರಾರ್ಥಿಗಳಿಗೆ ವಿಶೇಷವಾದ ಅನುಭವವನ್ನು ನೀಡುತ್ತದೆ.ಮಾತ್ರವಲ್ಲದೇ ವಿದ್ಯಾರ್ಥಿಗಳಿಗೂ ಸೃಜನಾತ್ಮಕ ಚಟುವಟಿಕೆಗಳತ್ತ ಒಲವು ಮೂಡಿಸುವಂತೆ ಮಾಡೋದಕ್ಕೆ ಇಂತಹ ಶಿಬಿರಗಳು ಸಹಕಾರಿ.ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ಮುನ್ನಡೆದರೆ ಖಂಡಿತ ಯಶಸ್ಸನ್ನು ಪಡೆಯುವುದಕ್ಕೆ ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಅಮರ ಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ, ಕಾಲೇಜಿನ ಶೈಕ್ಷಣಿಕ ಸಲಹೆಗಾರ ಪ್ರೊ. ಎಂ. ಬಾಲಚಂದ್ರ ಗೌಡ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಕೆ.ವಿ.ಜಿ. ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಬೊಳ್ಳೂರು, ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದ ಅನ್ನಸಂತರ್ಪಣಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗೌಡ ಕೊಡ್ತುಗುಳಿ, ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಲತಾ ಬಿ, ಸುಳ್ಯ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಮುರಳಿ ನಳಿಯಾರು, ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಕಾರ್ಯಾಧ್ಯಕ್ಷ ಗಣೇಶ್ ಪಿಲಿಕಜೆ, ಡಿ.ಸಿ.ಸಿ. ಬ್ಯಾಂಕ್ ಮಂಗಳೂರು ಮಾರಾಟಾಧಿಕಾರಿ ಆದರ್ಶ ಬೊಳ್ಳೂರು ಮತ್ತು ಎ.ಒ.ಎಲ್.ಇ. ನಿರ್ದೇಶಕಿ ಶ್ರೀಮತಿ ಮೀನಾಕ್ಷಿ ಕೆ.ಹೆಚ್ ಭಾಗವಹಿಸಿದ್ದರು.
ಶಿಬಿರಾಧಿಕಾರಿಗಳಾದ ಶ್ರೀಮತಿ ಚಿತ್ರಲೇಖ ಕೆ.ಎಸ್. ಸ್ವಾಗತಿಸಿ, ಸಂಜೀವ ಕುದ್ಪಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ಗಾನ ಕಾರ್ಯಕ್ರಮ ನಿರೂಪಿಸಿದರು. ಶಿಬಿರದ ನಾಯಕರುಗಳಾದ ಕೀರ್ತನ್ ಡಿ, ದೀಪ್ತಿ ಎ.ಎನ್, ಪ್ರಸಾದ್ ಕೆ.ಎನ್ ಮತ್ತು ರಕ್ಷಿತಾ ಕೆ ವೇದಿಕೆಯಲ್ಲಿ ಹಾಜರಿದ್ದರು. ಶಿಬಿರಾರ್ಥಿ ಕೀರ್ತನ್ ಕೆ.ವಿ. ಹೇಮನಾಥರನ್ನು ಸಭೆಗೆ ಪರಿಚಯಿಸಿದರು.