ನ್ಯೂಸ್ ನಾಟೌಟ್: ಸುಳ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಒಂದು ದಿನದ ವಿಶೇಷ ಜೀವನ ಕೌಶಲ್ಯ ತರಬೇತಿ ಕಾರ್ಯಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಫಾಬ್ರಿಕ್ ಪೈಂಟಿಂಗ್ ಎಂಬ ವಿಶೇಷ ಕಾರ್ಯಗಾರವನ್ನು ರೋವರ್ಸ್ ರೇಂಜರ್ಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರತ್ನಾವತಿ.ಡಿ ವಹಿಸಿದ್ದರು. ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕಲರ್ಸ್ ಗಾರ್ಮೆಂಟ್ಸ್, ನ್ಯೂ ಡಿಸೈನರ್ ಸುಳ್ಯ ಇದರ ಮಾಲಕರಾದ ರಾಜೇಶ್ವರಿ ಶುಭಕರ ಆಗಮಿಸಿದ್ದರು. ವೇದಿಕೆಯಲ್ಲಿ ಸಮಾಜಕಾರ್ಯ ವಿಭಾಗ ಮುಖ್ಯಸ್ಥೆ ಕೃಪಾ ಪಿ.ನ್, ಡಾ.ಅನುರಾಧ ಕುರುಂಜಿ ಹಾಗೂ ಹಿಂದಿ ಉಪನ್ಯಾಸಕಿ ಶ್ರೀಮತಿ ಮಮತಾ ಉಪಸ್ಥಿತರಿದ್ದರು.
ತರಬೇತುದಾರರಾದ ರಾಜೇಶ್ವರಿ ಶುಭಕರ “ವಿದ್ಯೆಯ ಜೊತೆಗೆ ಜೀವನ ಕೌಶಲ್ಯಗಳನ್ನು ಕಲಿಯುವುದು ಬಹಳ ಮುಖ್ಯ. ಜೀವನದಲ್ಲಿ ಇದು ಒಂದಲ್ಲ ಒಂದು ದಿನ ಖಂಡಿತವಾಗಿಯು ಉಪಯೋಗವಾಗುತ್ತದೆ” ಎಂದು ಹೇಳುವುದರೋದಿಗೆ ಕಾರ್ಯಗಾರವನ್ನು ಪ್ರಾರಂಭಿಸಿದರು. ಈ ಕಾರ್ಯಾಗಾರವು ಬಹಳ ವಿಶೇಷ ಹಾಗೂ ಆಸಕ್ತಿದಾಯಕವಾಗಿತ್ತು. ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರು ಬೆರೆತು ಬಹಳ ಉತ್ಸಾಹದಿಂದ ಪಾಲ್ಗೊಂಡರು.
ಕಾರ್ಯಗಾರದಲ್ಲಿ ವಿಶೇಷವಾಗಿ ಬಟ್ಟೆಗೆ ಬಳಸಲಾಗುವ ಪೈಂಟ್ ಹಾಗೂ ಚಿತ್ರ ಬಿಡಿಸಲು ಬೇಕಾದ ಉಪಕರಣಗಳ ಬಗ್ಗೆಯೂ ಮಾಹಿತಿ ನೀಡಿದರು.ಇದರೊಂದಿಗೆ ಪ್ರಾಕೃತಿಕವಾಗಿ ಸಿಗುವ ಎಲೆಗಳು ಹೂವುಗಳನ್ನು ಬಳಸಿ ತರಬೇತಿ ನೀಡಿದ್ದು ಬಹಳ ವಿಶೇಷವಾಗಿತ್ತು.ವಿದ್ಯಾರ್ಥಿಗಳು ಸ್ವತಃ ಫಾಬ್ರಿಕ್ ಪೈಂಟ್ ಮಾಡುವುದರೊಂದಿಗೆ ತರಬೇತಿಯನ್ನು ಪಡೆದುಕೊಂಡರು. ತರಬೇತುದಾರರು ಬಹಳ ಕ್ರಿಯಾತ್ಮಕವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ರೋವರ್ ರೇಂಜರ್ಸ್ ಘಟಕದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಜನ.ಕೆ ಸ್ವಾಗತಿಸಿ ಜ್ಯೋತಿ.ಬಿ ಕಾರ್ಯಕ್ರಮ ನಿರೂಪಿಸಿದರು. ರೋವರ್ ನಾಯಕ ಉಮೇಶ್ ಹಾಗೂ ರೇಂಜರ್ ನಾಯಕಿ ಶ್ರೀಮತಿ ಶೋಭಾ.ಏ ಪಾಲ್ಗೊಂಡಿದ್ದರು. ಹಾಗೂ ರೋವರ್ ಘಟಕದ ನಾಯಕ ಚಂದನ್.ಎಚ್.ಎನ್ ಹಾಗೂ ರೇಂಜರ್ ಘಟಕದ ನಾಯಕಿ ಉಜನ ಕೆ ಇತರ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.