ನ್ಯೂಸ್ ನಾಟೌಟ್: ಕಳೆದ ತಿಂಗಳು ಸುಳ್ಯದಿಂದ ನಾಪತ್ತೆಯಾಗಿದ್ದ ಮೊಬೈಲ್ ಫೋನ್ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ಅದನ್ನು ಸುಳ್ಯಕ್ಕೆ ವಾಪಸ್ ತರಿಸುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ನವೆಂಬರ್ ನಲ್ಲಿ ಸುಳ್ಯದ ವ್ಯಕ್ತಿಯೊಬ್ಬರು ಮೊಬೈಲ್ ಫೋನ್ ಕದ್ದು ಹೋಗಿತ್ತು. ಈ ಕುರಿತಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ವಾರಸುದಾರರು ದೂರು ನೀಡಿದ್ದರು. ಅದರಂತೆ ಪೊಲೀಸರು ಮೊಬೈಲ್ ಕಳ್ಳನ ಹಿಂದೆ ಬಿದ್ದಿದ್ದರು. ಆತ ಮೊಬೈಲ್ ಆನ್ ಮಾಡಿಕೊಂಡ ಸಂದರ್ಭದಲ್ಲಿ ಲೊಕೇಷನ್ ಆಧಾರದಲ್ಲಿ ಆತನನ್ನು ಕಂಡು ಹಿಡಿಯಲು ಪೊಲೀಸರಿಗೆ ಸಾಧ್ಯವಾಗಿದೆ. ಇದೀಗ ಮತ್ತೆ ಫೋನ್ ವಾರಸುದಾರರ ಕೈ ಸೇರಿದೆ. ಸುಳ್ಯ ಪೊಲೀಸರ ಕಾರ್ಯಕ್ಷಮತೆಗೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.