ನ್ಯೂಸ್ ನಾಟೌಟ್ : ಖ್ಯಾತ ಲೇಖಕಿ ಮತ್ತು ಸಮಾಜ ಸೇವಕಿ ಸುಧಾ ಮೂರ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜ್ಯಸಭೆ ಸದಸ್ಯತ್ವಕ್ಕೆ ನಾಮನಿರ್ದೇಶನ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಅಂತರ್ ರಾಷ್ಟ್ರೀಯ ಮಹಿಳಾ ದಿನ (ಮಾರ್ಚ್ ೮)ದಂದು ಸುಧಾಮೂರ್ತಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ವಿಶೇಷವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಧಾಮೂರ್ತಿ ಅವರನ್ನು ಅಭಿನಂದಿಸಿದ್ದಾರೆ. ರಾಜ್ಯಸಭೆಯಲ್ಲಿ ಸುಧಾಮೂರ್ತಿ ಅವರ ಉಪಸ್ಥಿತಿ ದೇಶದ ನಾರಿ ಶಕ್ತಿಯ ಪ್ರಬಲ ದ್ಯೋತಕವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
“ಭಾರತದ ರಾಷ್ಟ್ರಪತಿಗಳು ಶ್ರೀಮತಿ ಸುಧಾ ಮೂರ್ತಿಯನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಖುಷಿ ನೀಡಿದೆ. ಸಮಾಜ ಸೇವೆ, ದಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅವರ ಸೇವೆ ಅಪಾರ ಮತ್ತು ಸ್ಫೂರ್ತಿದಾಯಕ” ಎಂದು ಪ್ರಧಾನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.