ನ್ಯೂಸ್ ನಾಟೌಟ್: ಕಲ್ಲುಗುಂಡಿಯ ಸಂಪಾಜೆಯ ಕೈಪಡ್ಕ ರಸ್ತೆ ತಿರುಗುವಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಲಾರಿಗೆ ಗುದ್ದಿ ಬಳಿಕ ರಸ್ತೆಯ ಬದಿಯಲ್ಲಿ ಅಳವಡಿಸಿರುವ ಕಲ್ಲೊಂದಕ್ಕೆ ಡಿಕ್ಕಿಯಾಗಿರುವ ಘಟನೆ ಇದೀಗ ನಡೆದಿದೆ. ಘಟನೆಯಲ್ಲಿ ನಾಲ್ವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲಎಂದು ತಿಳಿದು ಬಂದಿದೆ.
ಲಾರಿಯೊಂದು ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿತ್ತು. ಕಾರೊಂದು ಮಡಿಕೇರಿಯಿಂದ ಸುಳ್ಯದತ್ತ ತೆರಳುತ್ತಿತ್ತು. ಈ ವೇಳೆ ಕಾರು ಚಾಲಕ ನಿಯಂತ್ರಣ ತಪ್ಪಿ ಲಾರಿಯ ಟೈರ್ ಗೆ ಗುದ್ದಿದ್ದಾನೆ. ಸಂಪೂರ್ಣ ರಾಂಗ್ ಸೈಡ್ ನಲ್ಲಿ ಬಂದ ಕಾರನ್ನು ಗಮನಿಸಿದ ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಸಂಭವನೀಯ ಭಾರಿ ದುರಂತ ತಪ್ಪಿದೆ. ಲಾರಿ ಗುದ್ದಿದ ಬಳಿಕ ರಸ್ತೆಯ ಬದಿಯಲ್ಲಿ ಅಳವಡಿಸಿರುವ ಕಲ್ಲೊಂದಕ್ಕೆ ಡಿಕ್ಕಿಯಾದ ಕಾರಿನ ಏರ್ ಬ್ಯಾಗ್ ಓಪನ್ ಆಗಿದೆ. ಕಾರು ಜಖಂಗೊಂಡಿದೆ. ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದೆ ಎನ್ನಲಾಗಿದೆ.