ನ್ಯೂಸ್ ನಾಟೌಟ್: ಆಧ್ಯಾತ್ಮಿಕ ಗುರು ಇಶಾ ಫೌಂಡೇಶನ್ನ ಸಂಸ್ಥಾಪಕ (founder of the Isha Foundation) ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರಿಗೆ ಆರೋಗ್ಯದಲ್ಲಿ ಏರು ಪೇರು ಉಂಟಾಗಿದೆ. ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದು, ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಸದ್ಯ ಜಗ್ಗಿ ವಾಸುದೇವ್ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ (Emergency brain surgery) ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಮಾರ್ಚ್ 17ರಂದು ಸದ್ಗುರು ಮೆದುಳಿನಲ್ಲಿ ಭಾರೀ ಊತ ಮತ್ತು ರಕ್ತಸ್ರಾವ ಉಂಟಾಗಿತ್ತು. ಈ ಹಿನ್ನೆಲೆ ಡಾ.ವಿನಿತ್ ಸೂರಿ ಪರೀಕ್ಷಿಸಿ, ಎಂಆರ್ಐಗೆ ಸಲಹೆ ನೀಡಲಾಗಿತ್ತು. ಈ ವೇಳೆ ಅವರ ಮೆದುಳಿನಲ್ಲಿ ಭಾರೀ ರಕ್ತಸ್ರಾವ ಪತ್ತೆಯಾಗಿದೆ. ಸದ್ಗುರು ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟು ನಿರಂತರ ವಾಂತಿ ಮತ್ತು ತೀವ್ರ ತಲೆನೋವಿನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಮೆದುಳಿನಲ್ಲಿ ಊತ ಹಾಗೂ ರಕ್ತಸ್ರಾವ ಪತ್ತೆಯಾದ ಬಳಿಕ ಅಪೋಲೋ ವೈದ್ಯ ತಂಡದಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಡಾ. ವಿನಿತ್ ಸೂರಿ, ಡಾ. ಪ್ರಣವ್ ಕುಮಾರ್, ಡಾ. ಸುಧೀರ್ ತ್ಯಾಗಿ ಮತ್ತು ಡಾ.ಎಸ್ ಚಟರ್ಜಿ ಸೇರಿದಂತೆ ದೆಹಲಿಯ ಅಪೋಲೋ ವೈದ್ಯರ ತಂಡವು ಶಸ್ತ್ರಚಿಕಿತ್ಸೆ ನಡೆಸಿದೆ. ಸದ್ಯ ಸದ್ಗುರು ಅವರನ್ನು ವೆಂಟಿಲೇಟರ್ನಿಂದ ತೆಗೆಯಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ.