ನ್ಯೂಸ್ ನಾಟೌಟ್: ಹೈದರಾಬಾದ್ನ ನೆಹರೂ ಮೃಗಾಲಯದಲ್ಲಿದ್ದ ದೈತ್ಯ ಆಮೆ ಚಾಣಕ್ಯ ತನ್ನ 125ನೇ ವಯಸ್ಸಿಗೆ ಇಂದು(ಮಾ.೧೭) ಕೊನೆಯುಸಿರೆಳೆದಿದೆ. ಮೃಗಾಲಯದ ಅತ್ಯಂತ ಹಿರಿಯ ನಿವಾಸಿ ಎಂದು ಗುರುತಿಸ್ಪಡುತ್ತಿದ್ದ ಚಾಣಕ್ಯ ಹೆಸರಿನ ಆಮೆಯ ನಿಧನಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.
ಚಾಣಕ್ಯ ತನ್ನ ವಯೋಸಹಜ ಸಮಸ್ಯೆಗಳಿಂದ ಕೊನೆಯುಸಿರೆಳೆದಿದೆ ಎನ್ನಲಾಗಿದೆ. ಕಳೆದ 10 ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ ಎಂದು ಮೃಗಾಲಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಬೆಳಗ್ಗೆ ಮೃಗಾಲಯದ ಸಿಬ್ಬಂದಿ ಆವರಣವನ್ನು ಸ್ವಚ್ಛಗೊಳಿಸಲು ಹೋದಾಗ ಚಾಣಕ್ಯ ಕೊನೆಯುಸಿರೆಳೆದ ಬಗ್ಗೆ ತಿಳಿದಿದೆ. 1963ರಲ್ಲಿ ನಾಂಪಲ್ಲಿಯ ಸಾರ್ವಜನಿಕ ಉದ್ಯಾನದಿಂದ (ಬಾಗ್-ಎ-ಆಮ್) ಚಾಣಕ್ಯನನ್ನು ಹೈದರಾಬಾದ್ನ ನೆಹರೂ ಮೃಗಾಲಯಕ್ಕೆ ಕರೆ ತರಲಾಗಿತ್ತು.
ಮೃಗಾಲಯ ಸ್ಥಾಪಿಸುವ ಮುನ್ನ ಇದು ಉದ್ಯಾನವನ ಆಗಿತ್ತು. ಈ ಹಿರಿಯ ಆಮೆಯ ಪೋಸ್ಟ್ ಮಾರ್ಟಮ್ ರಿಪೋರ್ಟ್ ಹೊರ ಬಂದಿದೆ. ಬಹು ಅಂಗಾಂಗ ವೈಫಲ್ಯದಿಂದಾಗಿ ಚಾಣಕ್ಯ ನಿಧನವಾಗಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಹೆಚ್ಚಿನ ತನಿಖೆಗಾಗಿ ಆಮೆಯ ಮಾದರಿಗಳನ್ನು ಪಶು ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.