ನ್ಯೂಸ್ ನಾಟೌಟ್ : ಕಡಬ ತಾಲೂಕಿನ ಪುಣ್ಚತ್ತಾರು ಕರಿಮಜಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಅದ್ದೂರಿಯಿಂದ ನಡೆಯಲಿದೆ.
ಏಪ್ರಿಲ್ 3 ಮತ್ತು 4ರಂದು ನಡೆಯಲಿರುವ ಈ ಒತ್ತೆಕೋಲದ ಪ್ರಯುಕ್ತ ಇದರ ಗೊನೆ ಮುಹೂರ್ತ ಕಾರ್ಯಕ್ರಮವು ಮಾ.27ರಂದು ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಮೊಕ್ತೇಸರ ವೆಂಕಟ್ರಮಣ ಆಚಾರ್ಯ ವಿಷ್ಣುಪುರ, ಜನಾರ್ದನ ಆಚಾರ್ಯ ವಿಷ್ಣುಪುರ, ಕೃಷ್ಣ ಆಚಾರ್ಯ ವಿಷ್ಣುಪುರ, ಆಡಳಿತ ಸಮಿತಿ ಉಪಾಧ್ಯಕ್ಷ ಶೇಷಪ್ಪ ಗೌಡ ಬೆದ್ರಂಗಳ ಹಾಗೂ ಹುಕ್ರಪ್ಪ ಗೌಡ ಪುಣ್ಚತ್ತಾರು ಮತ್ತಿತರರು ಹಾಜರಿದ್ದರು.