ನ್ಯೂಸ್ ನಾಟೌಟ್: ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗೆ ಅನಾರೋಗ್ಯ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಪ್ರತಿಭಾ ಪಾಟೀಲ್ ಜ್ವರ ಮತ್ತು ಎದೆ ಸೋಂಕಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ.
ಪಾಟೀಲ್ (89) ಅವರನ್ನು ಬುಧವಾರ(ಮಾರ್ಚ್ 14) ಭಾರತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ಮಾಜಿ ರಾಷ್ಟ್ರಪತಿ ಪಾಟೀಲ್ ಪತಿ ದೇವಿಸಿಂಗ್ ಶೇಖಾವತ್ ಹೃದಯಾಘಾತದಿಂದ 89 ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಪಾಟೀಲ್ 2007 ರಿಂದ 2012 ರವರೆಗೆ ಸೇವೆ ಸಲ್ಲಿಸಿದ ಭಾರತದ ಗೌರವಾನ್ವಿತ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಇತಿಹಾಸವನ್ನು ನಿರ್ಮಿಸಿದರು.