ನ್ಯೂಸ್ ನಾಟೌಟ್ : ಇತ್ತೀಚೆಗೆ ನ್ಯೂಸ್ ನಾಟೌಟ್ ತಂಡ ‘ಲೋಕ ಸಭಾ ಸಮರ ಸಂಚಾರ’ ಎಂಬ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮವನ್ನ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆಸಿತ್ತು. ಲೋಕ ಸಮರದಲ್ಲಿ ಮತದಾರನ ಒಲವು ಯಾರ ಕಡೆಗಿದೆ..? ಅನ್ನೊ ಸಮೀಕ್ಷೆ ನಡೆಸಿತ್ತು.ಆಗ ಹೆಚ್ಚಿನ ಜನ ಸೌಜನ್ಯಳಿಗೆ ನ್ಯಾಯ ಸಿಗಬೇಕು,ಇಲ್ದಿದ್ರೆ ಯಾರಿಗೂ ಮತ ನೀಡುವುದಿಲ್ಲ ಎನ್ನುವ ಅಭಿಪ್ರಾಯವನ್ನು ಜನ ವ್ಯಕ್ತ ಪಡಿಸಿದ್ದರು.
ಇದೀಗ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದಂತೆ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿಯೇ ನೋಟಾ (NOTA) ಅಭಿಯಾನ ಶುರುವಾಗಿದೆ. ಈ ಸಲ ನಾವು ಯಾರಿಗೂ ಮತ ನೀಡುವುದಿಲ್ಲ ನಮ್ಮ ಮತ ಏನಿದ್ದರೂ ‘ ನೋಟಾ’ ಗೆ ಎಂದು ಸೌಜನ್ಯ ಪರ ( Sowjanya Protest ) ಹೋರಾಟಗಾರರು ಮತ್ತು ಸೌಜನ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಲಕ್ಷಾಂತರ ಮಂದಿ ಹೇಳುತ್ತಿದ್ದಾರೆ.ಈ ಕುರಿತಂತೆ ಸೌಜನ್ಯ ಪರ ವಾಟ್ಸಾಪ್ ಗ್ರೂಪ್ಗಳಲ್ಲಿಯೂ ಚರ್ಚೆಗಳು ನಡಿತಿವೆ. ಆ ಮೂಲಕ ಮಂಗಳೂರು ಲೋಕಸಭಾ ಕ್ಷೇತ್ರ ಹೊಸದೊಂದು ಹೋರಾಟಕ್ಕೆ ಸಾಕ್ಷಿಯಾಗಿದೆ. ಯಾವ ಅಭ್ಯರ್ಥಿಗಳು ಕೂಡಾ ತಮಗೆ ಸೂಕ್ತ ಅಲ್ಲ ಅನ್ನುವ ಸಂದರ್ಭದಲ್ಲಿ ‘ ನೋಟಾ’ ಮತ ಚಲಾಯಿಸಲಾಗುತ್ತದೆ.
ಹೀಗಾಗಿ ಓಟಿಗೆ ಮೊದಲು ಒಂದು ವಿಷಯವಂತೂ ನಿರ್ಧಾರವಾಗಲೇಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಪರ್ಧಿಸುವ ಯಾವುದೇ ಪಕ್ಷದ ಯಾವುದೇ ಅಭ್ಯರ್ಥಿ ಇರಲಿ,ಸೌಜನ್ಯ ವಿಚಾರದಲ್ಲಿ ಮೊದಲು ತಮ್ಮ ನಿರ್ಧಾರವನ್ನು ಪ್ರಕಟಿಸಲೇ ಬೇಕಿದೆ. ಈ ಸಲ ಸೌಜನ್ಯ ವಿಚಾರದಲ್ಲಿ ನಿಲುವೇನು..? ಅನ್ನುವುದನ್ನು ಜನರೆದುರು ಸ್ಪಷ್ಟವಾಗಿ ತಿಳಿಸುವ ಅಗತ್ಯತೆ ಇದೆ. ಸೌಜನ್ಯಳಿಗೆ ನ್ಯಾಯ ಓದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾದರೆ ಮಾತ್ರ ಜನರು ಓಟು ಹಾಕುತ್ತಾರೆ. ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷದ ಅಭ್ಯರ್ಥಿ ಇರಲಿ ಮೊದಲು ಸೌಜನ್ಯ ಹೋರಾಟದ ಬಗೆಗಿನ ನಿಲುವನ್ನು ಸ್ಪಷ್ಟಪಡಿಸಲೇಬೇಕಿದೆ. ಸದ್ಯ ನೋಟಾ ಚಳವಳಿ ಇದೀಗ ಆರಂಭವಾಗಿದ್ದು, ತೀವ್ರ ಸಂಚಲನ ಮತ್ತು ಕುತೂಹಲವನ್ನು ಉಂಟುಮಾಡಿದೆ.