ನ್ಯೂಸ್ ನಾಟೌಟ್: ಮನೆಯವರೆಲ್ಲರೂ ನಮಾಜ್ನಲ್ಲಿ ಮಾಡುತ್ತಿದ್ದಾಗ ಮೂರು ವರ್ಷದ ಮಗುವೊಂದು ಆಟವಾಡುತ್ತಾ ಹೋಗಿ ನೀರಿನ ತೊಟ್ಟಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ (Davanagere News) ಹೊನ್ನಾಳಿ ಪಟ್ಟಣದ ತುಂಗಭದ್ರಾ ಬಡಾವಣೆಯಲ್ಲಿ ನಡೆದಿದೆ.
ಮನೆಯಲ್ಲಿ ಎಲ್ಲರೂ ನಮಾಜ್ ಮಾಡುತ್ತಿದ್ದರು. ಆಗ ಮಗು ಹೊರಗಡೆ ಆಟವಾಡುತ್ತಿತ್ತು. ಮೂರು ವರ್ಷದ ಮಗು ಅಸದ್ ಅಹಮದ್ ಆಟವಾಡುತ್ತಾ ಹೋಗಿ ನೀರಿನ ತೊಟ್ಟಿಗೆ ಬಿದ್ದಿದ್ದು, ನಮಾಜ್ ಮುಗಿಯುವ ವರೆಗೂ ಯಾರಿಗೂ ತಿಳಿಯಲೇ ಇಲ್ಲ. ನಮಾಜ್ ಮುಗಿಸಿ ಹೊರಗೆ ಬಂದಾಗ ಮಗು ಕಾಣಿಸಲಿಲ್ಲ. ಎಲ್ಲರೂ ಸೇರಿ ಹುಡುಕಿದರೂ ಸಿಗಲಿಲ್ಲ. ಕೊನೆಗೆ ಎರಡು ಗಂಟೆ ಹುಡುಕಿದ ಬಳಿಕ ನೀರಿನ ತೊಟ್ಟಿಯಲ್ಲಿ ಮಗು ಪತ್ತೆಯಾಗಿದೆ.
ಕೂಡಲೇ ಮಗುವನ್ನು ಮೇಲೆತ್ತಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಾಣ ಉಳಿಸಲಾಗಲಿಲ್ಲ ಎಂದು ವರದಿ ತಿಳಿಸಿದೆ. ಘಟನೆ ನಡೆದದ್ದು ಬಾಲಕನ ತಾಯಿಯ ತವರು ಮನೆಯಲ್ಲಿ ಎನ್ನಲಾಗಿದ್ದು, ಬಾಲಕ ತಾಯಿ ಶಿಕಾರಿಪುರದ ಗಂಡನ ಮನೆಯಿಂದ ತನ್ನ ತವರು ಮನೆಗೆ ಬಂದಿದ್ದರು. ಈ ವೇಳೆ ದುರಂ ಸಂಭವಿಸಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.