ನ್ಯೂಸ್ ನಾಟೌಟ್ : ಮನೆಯಲ್ಲಿ ಮದುವೆ ಅಂದ್ರೆ ಅದರ ಸಂಭ್ರಮವೇ ಬೇರೆ.ಜತೆಗೆ ಒಂದಷ್ಟು ಕೆಲಸಗಳು ಕೂಡ ಇರುತ್ತವೆ. ನೆಂಟರು, ಬಂದು-ಬಳಗದವರಿಗೆ ಮದುವೆಗೆ ಕರಿಬೇಕು.ಆಮಂತ್ರಣ ಪತ್ರಿಕೆ ಪ್ರಿಂಟ್ ಹೊಡಿಸಬೇಕು. ಹೀಗೆ ಸಾವಿರಾರು ಜವಾಬ್ದಾರಿಗಳು ಇರುತ್ತವೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಯಾರದ್ದೇ ಮದುವೆ ನಿಶ್ಚಯವಾದರೂ ಮೊದಲ ಪತ್ರಿಕೆ ವಿಘ್ನವಿನಾಶಕ ಗಣೇಶನಿಗೆ ಅರ್ಪಿಸಲಾಗುತ್ತದೆ. ಇದಾದ ಬಳಿಕವೇ ಬಂಧು ಬಳಗಕ್ಕೆ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯವನ್ನು ಮುಂದುವರೆಸಲಾಗುತ್ತದೆ.ಆದರೆ ಇಲ್ಲೊಂದು ಕಡೆ ಮುಸ್ಲಿಂ ಮದುವೆಯೊಂದು ನಡೆದಿದೆ.ಆ ಮದುವೆಯ ಆಮಂತ್ರಣ ಪತ್ರಿಕೆ ಮಾತ್ರ ಡಿಫರೆಂಟ್ ಆಗಿದೆ ಏಕೆ ಅಂತಿರಾ ಈ ರಿಪೋರ್ಟ್ ಓದಿ…
ಸಾಮಾನ್ಯವಾಗಿ ಮುಸ್ಲಿಂ ಧರ್ಮದ ನಿಕಾಹ್ ನಲ್ಲಿ ಉರ್ದು ಅಥವಾ ಇಂಗ್ಲಿಷ್ನಲ್ಲಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗುತ್ತದೆ. ಆದರೆ, ಉತ್ತರ ಪ್ರದೇಶದ ಬಹ್ರೈಜ್ ಜಿಲ್ಲೆಯ ಮುಸ್ಲಿಂ ಕುಟುಂಬವೊಂದು ಈ ಸಂಪ್ರದಾಯವನ್ನು ಸ್ವಲ್ಪ ಭಿನ್ನವಾಗಿಸಿದೆ. ಈ ಕುಟುಂಬ ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಿಂದಿಯಲ್ಲಿ ಮುದ್ರಿಸಿದೆ. ಮಾತ್ರವಲ್ಲ, ಆಮಂತ್ರಣ ಪತ್ರಿಕೆ ಹಿಂದೂ ಸಂಪ್ರದಾಯಗಳನ್ನು ಆಧರಿಸಿದೆ ಎನ್ನುವುದು ವಿಶೇಷ.
ಬಹ್ರೈಚ್ ಜಿಲ್ಲೆಯಲ್ಲಿ ಮುಸ್ಲಿಂ ಕುಟುಂಬವೊಂದು ಮುದ್ರಿಸಿರುವ ಮದುವೆ ಕಾರ್ಡ್ ಈಗ ವೈರಲಾಗಿದೆ. ಪಾಂಚಜನ್ಯ ಪ್ರಕಾರ, ಬಹ್ರೈಚ್ನ ಅಝುಲ್ ಕಮರ್ ಅವರು ತಮ್ಮ ಮಗನ ಮದುವೆಗಾಗಿ ಹಿಂದೂ ಸಂಪ್ರದಾಯವನ್ನು ಆಧರಿಸಿದ ಕಾರ್ಡ್ಗಳನ್ನು ಮುದ್ರಿಸಿದ್ದಾರೆ. ಇಷ್ಟು ಮಾತ್ರವಲ್ಲ, ಹಿಂದೂ ಸಂಪ್ರದಾಯಗಳ ಪ್ರಕಾರ, ಮದುವೆಯ ಮೊದಲ ಆಹ್ವಾನವನ್ನು ಶ್ರೀ ಗಣೇಶನಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಮದುವೆ ಕಾರ್ಡ್ನ ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ತಕ್ಷಣ, ಅದು ತಕ್ಷಣವೇ ವೈರಲ್ ಆಗಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವಧು ಮತ್ತು ವರ ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಫೆಬ್ರವರಿ 29 ರಂದು ಮದುವೆಯಾಗಿತ್ತು. ಹೀಗಾಗಿ ಹಿಂದೂಗಳು ಮದುವೆಗೆ ಆಗಮಿಸಿದ್ದರು. ಅವರಿಗಾಗಿ ಹಿಂದೂ ಸಂಪ್ರದಾಯದಂತೆ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ ಎಂದಿದ್ದಾರೆ ಅಝುಲ್ ಕಮರ್ . ಮದುವೆಗೆ ಬರುವ ಹಿಂದೂ ಅತಿಥಿಗಳಿಗೆ ಹಿಂದೂ ಸಂಪ್ರದಾಯದಂತೆ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಗಿತ್ತು. ಎಲ್ಲಾ ಹಿಂದೂಗಳಿಗೆ ಅವರ ಧರ್ಮದ ಪ್ರಕಾರ ಆಹ್ವಾನ ಕಳುಹಿಸಬೇಕು ಎನ್ನುವ ಯೋಚನೆ ನಮ್ಮದಾಗಿತ್ತು ಎನ್ನುತ್ತಾರೆ ವರನ ತಂದೆ ಅಜುಲ್ ಕಮರ್. ಅಷ್ಟೇ ಅಲ್ಲ ಹಿಂದೂಗಳಿಗಾಗಿ ಒಂದು ದಿನ ಮುಂಚಿತವಾಗಿ ಔತಣ ಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಹೇಳಿದರು.