ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಜನರು ತಮ್ಮ ಜನಪ್ರತಿನಿಧಿಗಳು ಬೇಡಿಕೆಗಲನ್ನು ಈಡೇರಿಸಿಲ್ಲ ಮತ್ತು ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರುತ್ತಿದ್ದು, ಮತದಾನ ಬಹಿಷ್ಕಾರಕ್ಕೆ ತೀರ್ಮಾನಿಸಿದ್ದಾರೆ.
ಇಂತಹ ಘಟನೆ ಸುಳ್ಯದಲ್ಲೂ ನಡೆದಿದ್ದು,ಸುಳ್ಯದ ಕನಕ ಮಜಲು ಮುಗೇರ ಗ್ರಾಮ ಸಮಿತಿ ವತಿಯಿಂದ ಚುನಾವಣಾ ಬಹಿಷ್ಕಾರ ಮಾಡಲು ತೀರ್ಮಾನಿಸಿದೆ. ಪರಿಶಿಷ್ಟ ಜಾತಿಗೆ ಸೇರಿದ ಅಂಬೇಡ್ಕರ್ ಭವನಕ್ಕೆ ಡಿಸಿ ಮಣ್ಣಭೂಮಿಯನ್ನು ಕೇಳಿದ್ದು, ಅದನ್ನು ನೀಡಲು ಸರ್ಕಾರ ನಿರಾಕರಿಸಿದೆ ಎನ್ನಲಾಗಿದೆ. ಸಾಮಾಜಿಕರಣಕ್ಕೆ ಮೀಸಲಿರಿಸಿದ್ದ ಕಾರಣ ಜಾಗವು ಮಂಜೂರು ಆಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದ್ದು, ಡಿಸಿ ಮಣ್ಣಭೂಮಿಯು ಪರಿಶಿಷ್ಟ ಜಾತಿಗೆ ಸೇರಿದ ಜಾಗವಾಗಿದೆ ಎಂದು ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಭೂಮಿ ಅಂಬೇಡ್ಕರ್ ಭವನಕ್ಕೆ ಮಂಜೂರಾಗದ ಕಾರಣ ಮತದಾನ ಬಹಿಷ್ಕಾರವನ್ನು ಮಾಡಲು ತೀರ್ಮಾನಿಸಿರುತ್ತೇವೆ ಎಂದು ಕನಕ ಮಜಲು ಮುಗೇರ ಗ್ರಾಮ ಸಮಿತಿ ತಿಳಿಸಿದ್ದು, ಜಿಲ್ಲಾಧಿಕಾರಿ ಬಂದು ಇದಕ್ಕೆ ಪರಿಹಾರ ಕೊಟ್ಟ ನಂತರವೇ ಚುನಾವಣೆಯಲ್ಲಿ ಮತ ಚಲಾಯಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.