ನ್ಯೂಸ್ ನಾಟೌಟ್ : ಪ್ರಧಾನಿ ಮೋದಿ ಅವರು ಇನ್ನೂ 10 ವರ್ಷ ಕಾಲ ದೇಶವನ್ನು ಆಳುತ್ತಾರೆ, ಇದೀಗ ನೀವು ೧೦ ವರ್ಷಗಳಲ್ಲಿ ನೋಡಿದ್ದು ಟ್ರೈಲರ್ ಅಷ್ಟೇ. ನೀವು ಪಿಕ್ಚರ್ ಇನ್ನು ನೋಡಬೇಕಾಗಿದೆ. ಅದು ಇನ್ನೂ ಬಾಕಿ ಇದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮಂಗಳವಾರ ವ್ಯಕ್ತಪಡಿಸಿದರು.
ಅವರು ಮಂಗಳೂರಿನ ಸಂಘನಿಕೇತನದಲ್ಲಿ ದ.ಕ.ಜಿಲ್ಲಾ ಮಟ್ಟದ ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 2024ರಿಂದ 2029ರ ವರೆಗೂ ಮೋದಿಯೇ ರಾಷ್ಟ್ರದ ನಾಯಕ. ಇದರಲ್ಲಿ ಯಾವುದೇ ಅನುಮಾನನೇ ಇಲ್ಲ.ಕಳೆದ 10 ವರ್ಷದ ಅವಧಿಯಲ್ಲಿ ಅವರು ಮಾಡಿರುವ ಸಾಧನೆ ನೂರು ವರ್ಷದಷ್ಟು ಎಂದು ಕೊಂಡಾಡಿದರು.
2024ರ ಲೋಕಸಭೆ ಚುನಾವಣೆ ದೇಶದ ಭದ್ರತೆ ಮತ್ತು ಭವಿಷ್ಯಕ್ಕೆ ನಿರ್ಣಾಯಕವಾಗಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಬಿಜೆಪಿಯ ಬದಲು ಭಾರತಕ್ಕೆ ಮತ ನೀಡಿ ಎಂದು ಕೇಳಬೇಕೆಂದು ಕರೆ ನೀಡಿದರು.ಈ ಚುನಾವಣೆಯಲ್ಲಿ ನಾವು ಬಿಜೆಪಿಗೆ ಮತ ಹಾಕುತ್ತಿಲ್ಲ, ಭಾರತಕ್ಕೆ ಮತ ಹಾಕುತ್ತಿದ್ದೇವೆ. ನಾವು ಭಾರತದ ಸುರಕ್ಷತೆ ಮತ್ತು ಭವಿಷ್ಯಕ್ಕಾಗಿ ಮತ ಹಾಕುತ್ತಿದ್ದೇವೆ, ಮುಂದೆ ವಿಶ್ವದಲ್ಲಿ ಭಾರತ ಮೂರನೇ ಆರ್ಥಿಕತೆ ಹೊಂದಿದ ದೇಶವಾಗಲಿದೆ. 2024ರ ಚುನಾವಣೆ ಹೊಸ ಇತಿಹಾಸ ನಿರ್ಮಿಸುವ ಚುನಾವಣೆ. ನಾವು ಸರ್ಕಾರಗಳನ್ನು ಐದು ವರ್ಷಗಳಿಗೊಮ್ಮೆ ಚುನಾಯಿಸುತ್ತೇವೆ. ಮೋದಿ 10 ವರ್ಷಗಳಲ್ಲಿ ನೂರು ವರ್ಷದ ಸಾಧನೆ ಮಾಡಿದ್ದಾರೆ ಎಂದರು.
ಮೋದಿ ಗ್ಯಾರಂಟಿ ಕಾಂಗ್ರೆಸ್ನ ಗ್ಯಾರಂಟಿಗಳಂತಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿಗಳು ಯಾವುದೂ ಪೂರ್ಣವಾಗಿಲ್ಲ. ಜನರನ್ನು ಮೂರ್ಖರನ್ನಾಗಿ ಮಾಡಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ.ಮೋದಿ ಗ್ಯಾರಂಟಿ ಎನ್ನುವುದೇ ಗ್ಯಾರಂಟಿಗಳ ಮಹಾ ಗ್ಯಾರಂಟಿ. ಕರ್ನಾಟಕದಲ್ಲಿ ದೇಶ ವಿರೋಧಿ ಜನರಿಗೆ ಸಿದ್ದರಾಮಯ್ಯ ಸರ್ಕಾರ ಬೆಂಬಲ ಕೊಡುತ್ತಿದೆ. ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಬೆಂಬಲಿಸುವ ಸರ್ಕಾರ ಎಂಥದ್ದು? ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದೇಶವಿರೋಧಿಗಳಿಗೆ ಬಲ ಬಂದಿದೆ. ವೋಟ್ ಬ್ಯಾಂಕ್ಗಾಗಿ ದೇಶದ್ರೋಹಿಗಳನ್ನು ಯಾರೂ ಬೆಂಬಲಿಸಬಾರದು. ಯಾವುದೇ ದೇಶ ವಿರೋಧಿ ಘಟನೆಗಳನ್ನು ಆಯಾ ಸರ್ಕಾರಗಳು ಖಂಡಿಸಬೇಕು ಎಂದು ತಿಳಿಸಿದರು.