ನ್ಯೂಸ್ ನಾಟೌಟ್ : ಆಕೆಗೆ ಕೇವಲ ಎಂಟು ವರ್ಷ ಪ್ರಾಯ. ಬಹುಶಃ ಆ ಪ್ರಾಯದಲ್ಲಿ ಇನ್ನೂ ಪ್ರಪಂಚ ಜ್ಞಾನವೇ ಬಂದಿರಲ್ಲ.ಆದರೆ ಈ ಬಾಲಕಿ ಸ್ವಂತ ಮನೆಯನ್ನೇ ಖರೀದಿಸಿದ್ದಾಳೆ ಗೊತ್ತಾ?ಅದಕ್ಕೆ ಹಣ ಬೇಕಲ್ವ? ಅಷ್ಟೊಂದು ಹಣ ಎಲ್ಲಿಂದ ಬರುತ್ತೆ ಅಂತ ನಿಮ್ಗೂ ಅಚ್ಚರಿಯಾಗ್ತ ಇರಬಹುದಲ್ವ? ಹೌದು, ಹಣವನ್ನು ಕೂಡಿಟ್ಟು ತಕೊಂಡಿದ್ದಾಳೆ. ಅರೆ! 8 ವರ್ಷ ಪ್ರಾಯಕ್ಕೆ ಇದೆಲ್ಲ ಸಾಧ್ಯನಾ? 30 ವರ್ಷ ದಾಟಿದ್ರೂ ಕೆಲವರಿಗೆ ಕೆಲಸನೇ ಸಿಗಲ್ಲ.. ಇನ್ನೂ ಕೆಲವರು ಸೋಮಾರಿಗಳಾಗಿ ಬಿದ್ದಿರುತ್ತಾರೆ.ಇಷ್ಟಾದ್ರೂ ಈಕೆಗೆ ಅದು ಹೇಗೆ ಸಾಧ್ಯವಾಯ್ತು?
ಸ್ವಂತ ಮನೆ ಖರೀದಿಸಬೇಕು ಎನ್ನುವುದು ಪತ್ರಿಯೊಬ್ಬರ ಕನಸು.ಅದಕ್ಕಾಗಿ ಪ್ರತಿ ದಿನ ಹೋರಾಟಗಳು ನಡಿತಲೇ ಇರುತ್ತೆ.ಹನಿ ಬೆವರು ಸುರಿಸಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬೇಕೆಂದ್ರೆ ಅದು ಸುಲಭದ ಕೆಲಸವಲ್ಲ.ದುಡಿದು ಸಂಪಾದನೆ ಮಾಡೋದು ಅಂದ್ರೆ ಅಷ್ಟೊಂದು ವೇಗವಾಗಿ ಹಣ ನಮ್ಮ ಕೈ ಸೇರೋದಿಲ್ಲ.ಆದರೆ 8 ವರ್ಷದ ಪುಟ್ಟ ಬಾಲಕಿ 5 ಕೋಟಿ ರೂ. ಬೆಲೆ ಬಾಳುವ ಮನೆಯನ್ನು ಖರೀದಿಸಿದ್ದಾಳೆ!! ಈ ಹುಡುಗಿಯ ಹೆಸರು ರೂಬಿ ಮೆಕ್ಕ್ಲೆಲನ್. ಆಕೆ ಆಸ್ಟ್ರೇಲಿಯಾದ ನಿವಾಸಿ.ಆಕೆ ಎಲ್ಲಿಯವಳಾದರೇನು? ನಮ್ಗೆ ಆಕೆ ಸಾಧನೆ ಮಾತ್ರವೇ ಮುಖ್ಯವಾಗುತ್ತೆ.ಇಷ್ಟು ಸಣ್ಣ ವಯಸ್ಸಿಗೆ ಅಷ್ಟೊಂದು ಬೆಲೆ ಬಾಳುವ ಮನೆ ಬಗ್ಗೆ ಯೋಚಿಸಿದ್ರೆನೇ ಅಚ್ಚರಿಯಾಗುತ್ತೆ ಅಲ್ವೇ?
ಡೈಲಿ ಸ್ಟಾರ್ ವರದಿ ಪ್ರಕಾರ, ಈ ಹುಡುಗಿ ಕೇವಲ 6 ವರ್ಷದವಳಿದ್ದಾಗ ಮನೆ ಖರೀದಿಸಿದ್ದಳು. ಆಗ ಆ ಮನೆಯ ಬೆಲೆ 3 ಕೋಟಿ ರೂ. ಇಷ್ಟು ಚಿಕ್ಕ ಹುಡುಗಿ ಕೋಟಿ ಕೋಟಿ ಬೆಲೆ ಬಾಳುವ ಮನೆಯ ಒಡತಿಯಾದದ್ದು ಹೇಗೆ ಎಂದು ಈಗ ನೀವು ಆಶ್ಚರ್ಯ ಪಡುತ್ತಿರಬೇಕು, ಹಾಗಾದರೆ ಇಲ್ಲಿ ತಿಳಿದುಕೊಳ್ಳಿ.
ವಾಸ್ತವವಾಗಿ, ಹುಡುಗಿ ತನ್ನ ಇಬ್ಬರು ಹಿರಿಯ ಸಹೋದರರ ಸಹಾಯದಿಂದ 3 ಕೋಟಿ ರೂಪಾಯಿ ಮೌಲ್ಯದ ಈ ಮನೆಯನ್ನು ಖರೀದಿಸಿದ್ದಳು. ರೂಬಿಯ ಹಿರಿಯ ಸಹೋದರ ಆಂಗಸ್ಗೆ 14 ವರ್ಷ, ಸಹೋದರಿ ಲೂಸಿಗೆ 13 ವರ್ಷ. ವಾಸ್ತವವಾಗಿ, ಈ ಮೂವರು ಸಹೋದರರು ಮತ್ತು ಸಹೋದರಿಯರು ಒಟ್ಟಿಗೆ ಮನೆ ಖರೀದಿಸಿದ್ದರು. ತನ್ನ ಪಾಕೆಟ್ ಮನಿಯಿಂದ ಸುಮಾರು 3 ಲಕ್ಷ ರೂಪಾಯಿ ಉಳಿಸಿ ಡೌನ್ ಪೇಮೆಂಟ್ ನೀಡಿದ್ದು, ಉಳಿದ ಹಣವನ್ನು ತಂದೆ ನೀಡಿದ್ದು, ಸ್ವಲ್ಪ ಹಣವನ್ನು ಇಎಂಐ ಆಗಿ ಕಟ್ಟುತ್ತಿದ್ದಾರೆ. ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಖರೀದಿಸಿದ ಈ ಮನೆಯು ನಾಲ್ಕು ಕೊಠಡಿಗಳನ್ನು ಹೊಂದಿದೆ. ಇದು ನೋಡಲು ಬಹಳ ಅದ್ಭುತವಾಗಿದೆ.
ಮಕ್ಕಳು ಕೋಟಿ ಬೆಲೆ ಬಾಳುವ ಮನೆ ಖರೀದಿಸಿದ ಖುಷಿ ವ್ಯಕ್ತಪಡಿಸಿದ ತಂದೆ, “ಮಕ್ಕಳು ದೊಡ್ಡವರಾದ ಮೇಲೆ ಈ ಮನೆಯನ್ನು ಮಾರಬೇಕಾದರೆ ಅದನ್ನು ಮಾರುತ್ತೇವೆ ಮತ್ತು ಅದರಿಂದ ಬಂದ ಹಣವನ್ನು ಮೂವರಿಗೂ ಸಮನಾಗಿ ಹಂಚುತ್ತೇನೆ ” ಎಂದಿದ್ದಾರೆ.