ನ್ಯೂಸ್ ನಾಟೌಟ್: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಸಲ್ಮಾನ್ ಮೌಲ್ವಿ ಎಂದು ಗುರುತಿಸಲಾಗಿದೆ. ಈತ ಹೊಸ ಮನೆ ಕಟ್ಟಲು ಯೋಜಿಸಿದ್ದ. ಅದಕ್ಕಾಗಿ ಹಣ ಬೇಕಿತ್ತು. ಮೌಲ್ವಿ ಇದ್ದ ಪ್ರದೇಶದಲ್ಲೇ ವಾಸವಾಗಿದ್ದ ಟೈಲರ್ ಸಲ್ಮಾನ್ನಿಂದ 23 ಲಕ್ಷ ರೂ. ಸುಲಿಗೆ ಮಾಡುವ ಉದ್ದೇಶ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿ ಇಬಾದ್ ನನ್ನು ಅಪಹರಿಸಲು ಯೋಜನೆ ರೂಪಿಸಿದ್ದ. ಮನೆ ನಿರ್ಮಾಣಕ್ಕೆ ಹಣಕಾಸಿನ ಅಗತ್ಯತೆಯಿಂದ ಈ ಕೃತ್ಯ ನಡೆಸುವ ಉದ್ದೇಶ ಹೊಂದಿದ್ದ. ಸಂಜೆಯ ಪ್ರಾರ್ಥನೆಯ ನಂತರ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಹುಡುಕಾಟ ನಡೆಸಿದ್ದರು.
ಮುದ್ದಾಸಿರ್ಗೆ, ನಿಮ್ಮ ಮಗ ಇಬಾದ್ ಸುರಕ್ಷಿತವಾಗಿ ಮನೆಗೆ ವಾಪಸ್ ಆಗಬೇಕೆಂದರೆ ಹಣ ಕೊಡಬೇಕು ಎಂದು ಬೆದರಿಕೆ ಕರೆ ಬಂದಿತ್ತು ಎನ್ನಲಾಗಿದೆ. ಈ ವಿಚಾರವನ್ನು ಮುದ್ದಾಸಿರ್ ಪೊಲೀಸರಿಗೆ ತಿಳಿಸಿದರು. ಸೋಮವಾರ(ಮಾ.೨೫) ಮಧ್ಯಾಹ್ನ ಪೊಲೀಸರು ಆರೋಪಿ ಸಲ್ಮಾನ್ ನಿವಾಸದ ಸ್ಥಳವನ್ನು ಪತ್ತೆಹಚ್ಚಿದರು. ಅಷ್ಟೊತ್ತಿಗಾಗಲೇ ಬಾಲಕನ ಹತ್ಯೆಯಾಗಿತ್ತು ಎಂದು ಬೆಳಕಿಗೆ ಬಂದಿದೆ. ಇಬಾದ್ನ ದೇಹವನ್ನು ಗೋಣಿಚೀಲದಲ್ಲಿ ತುಂಬಿ, ಮನೆಯ ಹಿಂದೆ ನಿರ್ದಯವಾಗಿ ಮರೆಮಾಡಲಾಗಿತ್ತು ಎನ್ನಲಾಗಿದೆ.