ಇತ್ತೀಚೆಗೆ ನಾವು ‘ಲೋಕ ಸಭಾ ಸಮರ ಸಂಚಾರ’ ಎಂಬ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮವನ್ನ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆಸಿದ್ದೆವು. ಲೋಕ ಸಮರದಲ್ಲಿ ಮತದಾರನ ಒಲವು ಯಾರ ಕಡೆಗಿದೆ..? ಅನ್ನೊ ಸಮೀಕ್ಷೆ ನಡೆಸಿದ್ದೆವು. ಈ ವೇಳೆ ಒಂದಷ್ಟು ಮಂದಿ ಕಾಮೆಂಟ್ ಹಾಕಿ ‘ಸೌಜನ್ಯ ನ್ಯಾಯದ ಪರ ನೀವೆಷ್ಟು ಧ್ವನಿ ಎತ್ತಿದ್ದೀರಿ..?’ ಎಂದು ನಮ್ಮನ್ನ ಪ್ರಶ್ನಿಸಿದ್ದರು. ಅಂಥಹ ಜನರಿಗಾಗಿ ಒಂದಷ್ಟು ಮಹತ್ವದ ಮಾಹಿತಿಗಳನ್ನು ನೀಡುತ್ತಿದ್ದೇನೆ. ದಯವಿಟ್ಟು ಎರಡು ನಿಮಿಷ ಪೂರ್ತಿಯಾಗಿ ಓದಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ.
ನಮ್ಮ ಚಾನಲ್ ಇದುವರೆಗೆ ಸೌಜನ್ಯ ನ್ಯಾಯದ ಪರ ಎಷ್ಟು ಧ್ವನಿ ಎತ್ತಿದೆ ಎಂದು ಪ್ರಶ್ನೆ ಮಾಡುವವರು ಮೊದಲು ಮಹೇಶ್ ಶೆಟ್ಟಿ ತಿಮರೋಡಿಯವರನ್ನ ಕೇಳಿ, ಇಲ್ಲ ತಮ್ಮಣ್ಣ ಶೆಟ್ಟಿಯವರನ್ನ ಕೇಳಿ ತಿಳಿದುಕೊಳ್ಳಿ. ಇದುವರೆಗೆ ನಮ್ಮ ಚಾನಲ್ ಸೌಜನ್ಯ ನ್ಯಾಯದ ಪರವಾಗಿ ಎಷ್ಟು ಕಾರ್ಯಕ್ರಮವನ್ನು ಉಚಿತವಾಗಿಯೇ ನೇರ ಪ್ರಸಾರವನ್ನು ಮಾಡಿದೆ ಅನ್ನೋದನ್ನ. ಇಲ್ಲವೇ ನೇರವಾಗಿ ನಮ್ಮ ಕಚೇರಿಗೆ ಬನ್ನಿ ನಮಗೆ ಕೋರ್ಟ್ ನಿಂದ ಬಂದಿರುವ ಬಂಡಲ್ ಗಟ್ಟಲೇ ನೋಟಿಸ್ ತೋರಿಸುತ್ತೇವೆ. ನಾವು ಯಾವುದೇ ವಿಚಾರವನ್ನ ಪೂರ್ವಪರ ತಿಳಿಯದೆ ಸುಮ್ಮನೆ ಮಾತನಾಡುವುದು ತಪ್ಪು. ಕೆಲವು ಸಲ ‘ಕೊ* ಲೆ, ಅತ್ಯಾ* ಚಾರ, ಹಿಂ* ಸೆ’ ಅಂತ ಪದ ಬಳಕೆ ವಿಡಿಯೋದಲ್ಲಿ ಬಂದಾಗ ಬೀಪ್ ಸೌಂಡ್ ಹಾಕಿದ್ದೇವೆ. ಅದಕ್ಕೆ ಕಾರಣ ನಾವಲ್ಲ. ಹೀಗೆ ಮಾಡದಿದ್ದರೆ ನಾಳೆ ನಮ್ಮ ಚಾನೆಲ್ ಯೂಟ್ಯೂಬ್ ಕಡೆಯಿಂದ ಶಾಶ್ವತವಾಗಿ ಡಿಲೀಟ್ ಆಗಬಹುದು. ಆದರೆ ವಿಷಯ ಮತ್ತು ವಿಚಾರಕ್ಕೆ ಧಕ್ಕೆ ಆಗದ ರೀತಿಯಲ್ಲಿ ನಾವು ಸೌಜನ್ಯಳ ಕಾರ್ಯಕ್ರಮದ ಪ್ರಸಾರವನ್ನ ಹಲವು ಸಲ ಮಾಡಿದ್ದೇವೆ. ಅಲ್ಲದೆ ಅನೇಕ ಸಂದರ್ಶನ, ವಿಶೇಷ ಪ್ಯಾಕೇಜ್ ಮಾಡಿ ಜನಪರ ಧ್ವನಿಯಾಗಿದ್ದೇವೆ. ಇದು ನಮ್ಮನ್ನು ಸಬ್ ಸ್ಕ್ರೈಬ್ ಮಾಡಿ ಫಾಲೋ ಮಾಡುವ ಅಭಿಮಾನಿಗಳಿಗೆ ಮಾತ್ರ ಗೊತ್ತು.
ಕೆಲವರು ನಮ್ಮ ಚಾನಲ್ ಅನ್ನು ಮೊದಲ ಬಾರಿಗೆ ನೋಡಿಕೊಂಡು ಕಾಮೆಂಟ್ ಹಾಕುವವರಿಗಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಜನ್ಯ ನ್ಯಾಯದ ಪರ ಹೋರಾಟ ಮಾಡಿದ ಕೆಲವೇ ಕೆಲವು ಚಾನೆಲ್ ಗಳ ಪೈಕಿ ‘ನ್ಯೂಸ್ ನಾಟೌಟ್ ‘ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಇದನ್ನು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಇಂದು ಒಂದು ಕಡೆಯಿಂದ ನಮ್ಮನ್ನು ಪ್ರೀತಿಸುವ ಬೆಳೆಸುವ ಜನರಿದ್ದರೆ ಮತ್ತೊಂದು ಕಡೆಯಿಂದ ನಮ್ಮನ್ನು ತುಳಿಯುವ ದೊಡ್ಡ ವರ್ಗವೇ ನಮಗರಿಯದೇ ಹುಟ್ಟಿಕೊಂಡಿದೆ. ಅಷ್ಟಿದ್ದರೂ ಕೂಡ ನ್ಯೂಸ್ ನಾಟೌಟ್ ಎಂದಿಗೂ ಯಾವುದಕ್ಕೂ ಬಗ್ಗದೆ ಸತ್ಯ- ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ ಅನ್ನೋದನ್ನ ಸ್ಪಷ್ಟಪಡಿಸುತ್ತೇನೆ. ಲೋಕ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಬಣ್ಣ ಬಣ್ಣದ ಮಾತುಗಳು ಶುರುವಾಗಿದೆ. ಇಷ್ಟರ ವರೆಗೆ ಜನರ ಮುಖವನ್ನೂ ನೋಡದವರು ಇನ್ನು ಮುಂದೆ ಅತ್ಯಂತ ಆಪ್ತರಂತೆ ಜನರ ಮುಂದೆ ನಿಂತು ಓಟು ಕೇಳುತ್ತಾರೆ. ಇದೆಲ್ಲವೂ ನಾಲ್ಕು ದಿನದ ಡ್ರಾಮಾ ಸಂತೆ ಇರಬಹುದು. ಆದರೆ ಓಟಿಗೆ ಮೊದಲು ಒಂದು ವಿಷಯವಂತೂ ನಿರ್ಧಾರವಾಗಲೇಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಪರ್ಧಿಸುವ ಯಾವುದೇ ಪಕ್ಷದ ಯಾವುದೇ ಅಭ್ಯರ್ಥಿ ಇರಲಿ, ಮೊದಲು ನೀವೊಂದು ನಿರ್ಧಾರ ಮಾಡಿ. ಈ ಸಲ ಸೌಜನ್ಯ ವಿಚಾರದಲ್ಲಿ ನಿಮ್ಮ ನಿಲುವೇನು..? ಅನ್ನುವುದನ್ನು ನಮ್ಮ ಜನರೆದುರು ಸ್ಪಷ್ಟವಾಗಿ ತಿಳಿಸಿ ಬಿಡಿ. ಆ ನಂತರ ನೀವು ಓಟಿಗೆ ನಿಲ್ಲಿ. ಸೌಜನ್ಯಳಿಗೆ ನ್ಯಾಯ ಓದಗಿಸುವ ನಿಟ್ಟಿನಲ್ಲಿ ನೀವು ಪ್ರಯತ್ನಿಸುವುದಾದರೆ ಮಾತ್ರ ಜನರು ನಿಮಗೆ ಓಟು ಹಾಕುತ್ತಾರೆ. ಇಲ್ಲವೆ ನೀವು ನಮ್ಮ ಕೈ ಯಿಂದ ಆಗುವುದಿಲ್ಲ ಅನ್ನುವುದನ್ನಾದರೂ ತಿಳಿಸಿ. ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷದ ಅಭ್ಯರ್ಥಿ ಇರಲಿ ಮೊದಲು ಸೌಜನ್ಯ ಹೋರಾಟದ ಬಗೆಗಿನ ತಮ್ಮ ನಿಲುವನ್ನು ಸ್ಪಷ್ಟಪಡಿಸಲೇಬೇಕಿದೆ. ಇದನ್ನು ಹೌದು ಅನ್ನುವವರು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ. ಒಟ್ಟಿನಲ್ಲಿ ರಾಜಕೀಯ ಕ್ಷಣಕ್ಕೊಂದು ಬಣ್ಣ ಪಡೆದುಕೊಳ್ಳುತ್ತಿದೆ.
ಸುಳ್ಳು ಅನ್ನುವುದನ್ನು ಬಹುತೇಕ ನಮ್ಮ ರಾಜಕಾರಣಿಗಳು ತಮ್ಮ ಮನೆಯ ದೇವರನ್ನಾಗಿಯೇ ಮಾಡಿಕೊಂಡಿದ್ದಾರೆ. ಒಬ್ಬರು ರಾಜಕಾರಣಿ ಇತ್ತೀಚೆಗೆ ನಮಗೆ ಸಿಕ್ಕಿದ್ರು.’.ಸರ್ ನಿಮ್ಮದೊಂದು ಸಂದರ್ಶನ ಬೇಕು’ ಅಂತ ಕೇಳಿದೆ. ಅದಕ್ಕೆ ಅವರು ಹೇಳಿದ್ರು ‘ನಿಮಗೆ ಸಂದರ್ಶನ ನೀಡುತ್ತೇನೆ, ಆದರೆ ನೀವು ಪ್ರಶ್ನೆ ಕೇಳಬಾರದು , ನಾನು ಹೇಳಿದನ್ನು ಮಾತ್ರ ತೆಗೆದುಕೊಳ್ಳಬೇಕೆಂದು ಉತ್ತರಿಸಿದರು. ‘ಅರೆ ಸ್ವಾಮಿ.. ನೀನು ಚೆಂಡು ಎಸೆದಂತೆ ಮಾಡು… ನಾನು ಬ್ಯಾಟಿಂಗ್ ಮಾಡಿದ ಹಾಗೆ ನಟಿಸುತ್ತೇನೆ’ ಅಂದ ಹಾಗಾಯಿತು. ಇವರ ಮಾತನ್ನು ಕೇಳಿ ನನಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಇದು ನಮ್ಮ ರಾಜಕಾರಣಿಗಳ ಕರ್ಮ. ಇಂತಹವರಿಂದ ನಾವು ಎಷ್ಟು ನ್ಯಾಯದ ನಿರೀಕ್ಷೆ ಮಾಡಬಹುದು. ಇಂದು ಬರೆಯಲೂ ಬಾರದ ಪತ್ರಿಕೋದ್ಯಮದ ಗಂಧ ಗಾಳಿ ಇಲ್ಲದ ಅದೆಷ್ಟೋ ಮಂದಿ ನಾವು ಪತ್ರಕರ್ತರೆಂದು ಸಮಾಜದಲ್ಲಿ ದೊಡ್ಡ ಪೋಸ್ ಕೊಡುವ ಸಂದರ್ಭದಲ್ಲಿ ಅವರ ಎದುರು ನಮ್ಮ ಪತ್ರಿಕೋದ್ಯಮದ ಅನುಭವ ಲೆಕ್ಕಕ್ಕೆ ಬರುವುದಿಲ್ಲ. ಹಾಗಂತ ವೃತ್ತಿಪರ ಪತ್ರಕರ್ತರ ತಂಡವನ್ನು ಹೊಂದಿರುವ ನಾವು ನಮ್ಮ ಹೋರಾಟವನ್ನು ಎಂದಿಗೂ ಬಿಡುವುದಿಲ್ಲ. ಒಂದಲ್ಲ ಒಂದು ದಿನ ಒಂದು ಕತ್ತೆಗೂ ಕಾಲ ಬರುತ್ತದೆಯಂತೆ. ಅಂತೆಯೇ ನಮಗೂ ಒಂದು ದಿನ ಬರುತ್ತದೆ. ಸತ್ಯ-ಸಮರ್ಥವಾಗಿ ನಾವು ನಿಭಾಯಿಸುವ ಕೆಲಸವಷ್ಟೇ ನಮ್ಮನ್ನು ಬೆಂಗಾವಲಾಗಿ ರಕ್ಷಿಸುತ್ತದೆ, ಒಂದೊಳ್ಳೆ ಪತ್ರಿಕೋದ್ಯಮವನ್ನು ಜನ ಬೆಂಬಲಿಸುತ್ತಾರೆ ಅನ್ನುವ ನಿರೀಕ್ಷೆಯಲ್ಲಿ ನಾವಿದ್ದೇವೆ. ‘ಸತ್ಯಮೇವ ಜಯತೆ’
Follow us for more updates:
FB PAGE : https://www.facebook.com/NewsNotOut2023
Insta : https://www.instagram.com/newsnotout/
Tweet : https://twitter.com/News_Not_Out
YouTube : https://www.youtube.com/@newsnotout8209
Koo app: https://www.kooapp.com/profile/NewsNotOut
Website : https://newsnotout.com/