ನ್ಯೂಸ್ ನಾಟೌಟ್ : ಪತ್ರಕರ್ತರೊಬ್ಬರು ‘ಅಚ್ಚರಿಯ ಅಭ್ಯರ್ಥಿ’ಯಾಗಿ ರಾಜಕಾರಣಕ್ಕೆ ಬಂದು ಜನರ ಮನ ಸೆಳೆದ ಪ್ರತಾಪ್ ಸಿಂಹ ಅವರಿಗೆ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದೆ. ೧೦ ವರ್ಷಗಳ ಕಾಲ ಪ್ರತಾಪ ಸಿಂಹ ಅವರು ಸಂಸದರಾಗಿ ಕೆಲಸ ಮಾಡಿದ್ದಾರೆ. ಇದೀಗ ಬಿಜೆಪಿ ಟಿಕೆಟ್ ಕೈತಪ್ಪಲು ಹಲವು ವಿಷಯಗಳು ಕಾರಣವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.ಹಾಗಾದರೆ ಏನಾಗಿರಬಹುದು?
ಇತ್ತೀಚೆಗಷ್ಟೇ ‘ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣದ ಆರೋಪಿ ಮೈಸೂರಿನ ಡಿ.ಮನೋರಂಜನ್ ಅವರಿಗೆ ಪಾಸ್ಗೆ ಶಿಫಾರಸು ಮಾಡಿದ್ದ ಪ್ರಕರಣ ದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು.ಈ ಪ್ರಕರಣ ಕೇಂದ್ರ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವನ್ನೂ ಉಂಟು ಮಾಡಿದ್ದಲ್ಲದೇ ಈ ವಿಷಯವನ್ನು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನವರು ಮುಂದಿಟ್ಟುಕೊಂಡು ದೊಡ್ಡ ಮಟ್ಟದಲ್ಲಿ ವಾಗ್ದಾಳಿ ನಡೆಸಬಹುದು; ಇದರಿಂದ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಮುಜುಗರ ಉಂಟಾಗಬಹುದು ಎಂಬ ಕಾರಣದಿಂದ ಪ್ರತಾಪ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ’ ಎಂದು ಹೇಳಲಾಗುತ್ತಿದೆ.
ಮಹಿಷ ದಸರಾ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗಳೂ ಸೇರಿದಂತೆ ಕೆಲವು ವಿವಾದಗಳಿಗೂ ಅವರು ಕಾರಣವಾಗಿದ್ದರು. ಮೈಸೂರು, ಕೊಡಗಿನಲ್ಲಿರುವ ಪಕ್ಷದ ನಾಯಕರೊಂದಿಗೆ ಸಮನ್ವಯ ಸಾಧಿಸುವಲ್ಲಿ ವಿಫಲವಾಗಿದ್ದರು.ಎಲ್ಲಕ್ಕಿಂತ ಮುಖ್ಯವಾಗಿ ಹಾಲಿ ಸಂಸದರ ಬಗ್ಗೆ ಸ್ಥಳೀಯ ನಾಯಕರಲ್ಲೇ ತೀವ್ರ ವಿರೋಧ ಇತ್ತು ಎಂದು ಹೇಳಲಾಗಿದೆ.ಕಾರ್ಯಕರ್ತರ ಜೊತೆಗೂ ಅಷ್ಟೇನು ಉತ್ತಮ ಒಡನಾಟ ಹೊಂದಿಲ್ಲ ಎಂಬ ಮಾತುಗಳೂ ಕೇಳಿಬಂದಿದ್ದವು. ಈ ಭಾಗದಲ್ಲಿನ ಪಕ್ಷದ ನಾಯಕರಾದ ಮಾಜಿ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಅಪ್ಪಚ್ಚು ರಂಜನ್, ಸಿ.ಎಚ್. ವಿಜಯಶಂಕರ್ ಮೊದಲಾದವರೊಂದಿಗೆ ಶೀತಲಸಮರ ನಡೆಯುತ್ತಲೇ ಇತ್ತು.ಮುಖಂಡರಿಂದ ತೀವ್ರ ವಿರೋಧವಿದೆ ಎನ್ನುವ ಸಂಗತಿಯು ಹೈಕಮಾಂಡ್ ಮಟ್ಟಕ್ಕೆ ಹೋಗಿತ್ತು ಎನ್ನಲಾಗಿದೆ.
ವಿ.ಸೋಮಣ್ಣ ಅವರೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದು ಬಿ.ಎಸ್.ಯಡಿಯೂರಪ್ಪ ಅವರ ಕೆಂಗಣ್ಣಿಗೆ ಗುರಿಯಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.ತಳಮಟ್ಟದ, ಅದರಲ್ಲೂ ಗ್ರಾಮಾಂತರ ಕಾರ್ಯಕರ್ತರೊಂದಿಗೆ ಹೆಚ್ಚಿನ ಒಡನಾಟ ಹೊಂದಿರಲಿಲ್ಲ. ಇದು ನಿಷ್ಠಾವಂತ ಕಾರ್ಯಕರ್ತರು–ಸ್ಥಳೀಯ ಬಿಜೆಪಿ ಮುಖಂಡರು ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿತ್ತು. ಅವರದ್ದೇ ಪಕ್ಷದ ಮಹಾನಗರಪಾಲಿಕೆ ಸದಸ್ಯರೊಂದಿಗೂ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ರಾಜಕಾರಣಿಯ ಪ್ರಬುದ್ಧತೆ; ವಿನಯ ಇರಲಿಲ್ಲ ಎನ್ನುವುದು ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.
‘ಎಲ್ಲವನ್ನೂ ನಾನೇ ಮಾಡಿದ್ದು’ ಎಂಬ ಅತಿಯಾದ ಆತ್ಮವಿಶ್ವಾಸದ ಮಾತುಗಳು ಹಾಗೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದುದು ಮುಳುವಾಗಿ ಪರಿಣಮಿಸಿದೆ. ತಮ್ಮ ವರ್ಚಸ್ಸು ವೃದ್ಧಿಗೆ ನೀಡಿದಷ್ಟು ಒತ್ತನ್ನು ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕೊಡಲಿಲ್ಲ ಎಂಬ ಅಸಮಾಧಾನವೂ ಪಕ್ಷದ ವಲಯದಲ್ಲಿತ್ತು. ಇದೂ ಕೂಡ ಅವರ ರಾಜಕೀಯ ಭವಿಷ್ಯವನ್ನು ಅತಂತ್ರಗೊಳಿಸಿದೆ.
ಅವರು ತಳಮಟ್ಟದ, ಅದರಲ್ಲೂ ಗ್ರಾಮಾಂತರ ಕಾರ್ಯಕರ್ತರೊಂದಿಗೆ ಹೆಚ್ಚಿನ ಒಡನಾಟ ಹೊಂದಿರಲಿಲ್ಲ. ಇದು ನಿಷ್ಠಾವಂತ ಕಾರ್ಯಕರ್ತರು–ಸ್ಥಳೀಯ ಬಿಜೆಪಿ ಮುಖಂಡರು ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿತ್ತು. ಅವರದ್ದೇ ಪಕ್ಷದ ಮಹಾನಗರಪಾಲಿಕೆ ಸದಸ್ಯರೊಂದಿಗೂ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ರಾಜಕಾರಣಿಯ ಪ್ರಬುದ್ಧತೆ; ವಿನಯ ಇರಲಿಲ್ಲ ಎನ್ನುವುದು ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.ಸಹೋದರ ವಿಕ್ರಂ ಸಿಂಹ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಮರ ಕಡಿದ ಪ್ರಕರಣ ವಿವಾದವಾಗಿತ್ತು. ಅವರ ತಮ್ಮನ ವಿರುದ್ಧ ಮೊಕದ್ದಮೆಯೂ ದಾಖಲಾಗಿತ್ತು; ಬಂಧನವೂ ಆಗಿತ್ತು. ಇದೂ ಕೂಡ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.
ಪ್ರತಾಪ್ ಸಿಂಹ ಹೆಸರನ್ನು ಹೈಕಮಾಂಡ್ ರಿಜೆಕ್ಟ್ ಮಾಡಿದ ಬೆನ್ನಲ್ಲೇ, ಹೊಸ ಅಭ್ಯರ್ಥಿ ಹುಡುಕಾಟಕ್ಕೆ ಇಳಿದಿದ್ದು ಆರ್ಎಸ್ಎಸ್. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಗ್ರಮಾನ್ಯ ಮುಖಂಡರು ರಾಜವಂಶಕ್ಕೆ ಗಾಳ ಹಾಕಿದ್ದಾರೆ. ರಾಜ್ಯಸಭಾ ಮಾಜಿ ಸದಸ್ಯ, ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಸಂಬಂಧಿ ಹರ್ಷವರ್ಧನ್ ಸಿಂಗ್ ಮೂಲಕ ಯದುವೀರ್ ಮನವೊಲಿಕೆ ಮಾಡಲಾಗಿದೆ. ಆರ್ಎಸ್ಎಸ್ ಪ್ರಮುಖರ ಮಾತಿಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಕೂಡ ತಲೆಬಾಗಿದ್ದಾರೆ ಎಂದು ತಿಳಿದುಬಂದಿದೆ.