ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಭರದ ಸಿದ್ಧತೆಗಳು ನಡಿತಿದ್ದರೆ ಇತ್ತ ಗ್ರಾಮಸ್ಥರು ನಮ್ಮ ಊರಿಗೆ ಸರಿಯಾದ ರಸ್ತೆಯೇ ಇಲ್ಲವೆಂದು ಕೆಂಡಾಮಂಡಲರಾಗಿದ್ದಾರೆ. ನಮ್ಮ ಈ ಪ್ರದೇಶದ ರಸ್ತೆ ಕಾಮಗಾರಿಯನ್ನು ಕೂಡಲೇ ಆರಂಭಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಈ ಬಗೆಗಿನ ಬ್ಯಾನರ್ನ್ನು ಕೂಡ ಹಾಕಲಾಗಿದೆ.ಸುಳ್ಯಕ್ಕೆ ಸಮೀಪವಾಗಿರುವ ಮಡಿಕೇರಿ ತಾಲೂಕಿನ ಪೆರಾಜೆ, ಅಲೆಟ್ಟಿ, ದೊಡ್ಡಡ್ಕ ,ಕಾಪುಮಲೆ, ಕುಂದಲಪಾಡಿ ಹಾಗೂ ಕುಂಬಳಚೇರಿ ಗ್ರಾಮ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕು. ತಪ್ಪಿದಲ್ಲಿ ಮುಂದಿನ ಲೋಕಸಭಾ ಚುನಾವಣಾ ಮತದಾನ ಬಹಿಷ್ಕರಿಸುವುದಾಗಿ ರಾಜ್ಯ ಹೆದ್ದಾರಿ ಮುಖ್ಯ ರಸ್ತೆಯಿಂದ ಆರು ಗ್ರಾಮಗಳಿಗೆ ತೆರಳುವ ರಸ್ತೆ ಎದುರು ಕಾಮಗಾರಿಯ ಮಾಹಿತಿ ಒಳಗೊಂಡ ಬೃಹತ್ ಬ್ಯಾನರ್ ಅಳವಡಿಸಿ ಎಚ್ಚರಿಕೆ ನೀಡಿದ್ದಾರೆ.
ನಬಾರ್ಡ್ ಯೋಜನೆಯಡಿ 2022 -23ನೇ ಸಾಲಿನ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಹಮ್ಮಿಕೊಳ್ಳಬೇಕಾಗಿತ್ತು. ಆದರೆ ಇದುವರೆಗೆ ಕಾಮಗಾರಿ ಆರಂಭಗೊಂಡಿರುವುದಿಲ್ಲ. ತಕ್ಷಣವೇ ರಸ್ತೆ ಕಾಮಗಾರಿ ಆರಂಭಿಸಬೇಕು. ತಪ್ಪಿದಲ್ಲಿ ಲೋಕಸಭಾ ಚುನಾವಣೆಯಲ್ಲಿ ಈ ವ್ಯಾಪ್ತಿಯ ಮತದಾರರು ಮತದಾನ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.