ನ್ಯೂಸ್ ನಾಟೌಟ್: ಆಹಾರ ಅರಸಿಕೊಂಡು ಬಂದ ಚಿರತೆಯೊಂದು ಆಹಾರ ಅರಸಿಕೊಂಡು ಬಂದು ಲೋಹದ ಮಡಕೆಯೊಳಗೆ ತಲೆ ಹಾಕಿರುವ ಘಟನೆಯೊಂದು ವರದಿಯಾಗಿದೆ.ಇದರಿಂದಾಗಿ ಚಿರತೆ ತಲೆಯನ್ನು ತೆಗೆಯಲು ಬಾರದೆ ಸುಮಾರು ಐದು ಗಂಟೆಗಳ ಕಾಲ ಒದ್ದಾಡಿದ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಹಳ್ಳಿಯೊಂದರಲ್ಲಿ ಬೆಳಕಿಗೆ ಬಂದಿದೆ.
ಗಂಡು ಚಿರತೆಯೊಂದು ಆಹಾರ ಅರಸಿಕೊಂಡು ಹಳ್ಳಿ ಕಡೆ ಬಂದಿದೆ.ಈ ವೇಳೆ ಮನೆಯೊಂದರ ಹೊರಭಾಗದಲ್ಲಿ ಇದ್ದ ಲೋಹದ ಮಡಕೆಯೊಳಗೆ ಏನೋ ಆಹಾರ ಇದೆ ಎಂದು ತಲೆ ಹಾಕಿದ್ದು, ತಲೆ ತೆಗೆಯೋದಕ್ಕೆ ಆಗದೆ ಚಡಪಡಿಸುತ್ತಿತ್ತು.ಎಷ್ಟೇ ಪ್ರಯತ್ನ ಪಟ್ಟರೂ ತಲೆಯನ್ನು ಮಡಕೆ ಒಳಗಿಂದ ತೆಗೆಯಲು ಸಾಧ್ಯವಾಗಲಿಲ್ಲ.ಈ ವೇಳೆ ಮನೆ ಮಂದಿ ಏನೋ ಸದ್ದು ಆಗುತ್ತಿದೆ ಎಂದು ಬಂದು ನೋಡಿದಾಗ ಚಿರತೆ ಮಡಕೆಯೊಳಗೆ ತಲೆ ಹಾಕಿ ಒದ್ದಾಡುತ್ತಿರುವುದು ಕಂಡುಬಂದಿದೆ.
ಇದನ್ನು ಕಂಡು ಮನೆಮಂದಿ ಅಕ್ಕಪಕ್ಕದ ಜನರಿಗೆ ಮಾಹಿತಿ ನೀಡಿದ್ದು, ಕ್ಷಣ ಮಾತ್ರದಲ್ಲೇ ಗ್ರಾಮಸ್ಥರು ಮನೆಯ ಬಳಿ ಸೇರಿದ್ದು ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಅರವಳಿಕೆ ಮದ್ದು ನೀಡಿ ಕೆಲ ಗಂಟೆಗಳ ಕಾರ್ಯಾಚರಣೆ ಬಳಿಕ ಮಡಕೆಯಿಂದ ಚಿರತೆಯ ತಲೆಯನ್ನು ಹೊರತೆಗೆಯಲಾಯಿತು.ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.