ವರದಿ: ಹರ್ಷಿತಾ ವಿನಯ್
ನ್ಯೂಸ್ ನಾಟೌಟ್: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಒಂದು ದಿನದ ಅತಿಥಿ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಟ್ರಮಟಾಲಾಜಿ, ಪಿಡಿಯೋಟ್ರಿಕ್ಸ್ ಆರ್ಥಪೆಡಿಕ್ಸ್, ಮೆಟಾಬಾಲಿಕ್ ಬೋನ್ ಡಿಸೀಸ್ , ಬೋನ್ ಟ್ಯೂಮರ್ಸ್ ಈ ವಿಚಾರದ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲಾಯಿತು. ಜಿ.ಎಮ್.ಸಿ ಮತ್ತು ಇ.ಎಸ್.ಐ ಆಸ್ಪತ್ರೆ ಕೊಯಂಬತ್ತೂರ್ ಇಲ್ಲಿನ ಆರ್ಥೋಪೆಡಿಕ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ.ಜಂಬುಕೇಶ್ವರನ್ ಈ ಎಲ್ಲ ವಿಷಯದ ಬಗ್ಗೆ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ.ನೀಲಾಂಬಿಕೈ ನಟರಾಜನ್ ವಹಿಸಿದ್ದರು. ಆರ್ಥೋಪೆಡಿಕ್ ವಿಭಾಗ ಮುಖ್ಯಸ್ಥ ಡಾ.ರಂಗನಾಥ್ ಅಥಿತಿಗಳನ್ನು ಸ್ವಾಗತಿಸಿದರು. ಈ ಸಂದರ್ಭ ಆನ್ ಲೈನ್ ಶೈಕ್ಷಣಿಕ ವೇದಿಕೆಗೆ ಹೆಸರಾಗಿರುವ ಪ್ರೆಪ್ಲ್ಯಾಡರ್ ಎಂಬ ಆಪ್ ಅನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಬಳಿಕ ಪ್ರೆಪ್ಲ್ಯಾಡರ್ ಆಪ್ ಹೊಂದಿರುವ ಟ್ಯಾಬ್ ಒಂದನ್ನು ಕಾಲೇಜಿನ ಗ್ರಂಥಾಲಯಕ್ಕೆ ಉಚಿತವಾಗಿ ಬಹುಮಾನ ರೂಪದಲ್ಲಿದಲ್ಲಿ ನೀಡಲಾಯಿತು.
NEET PG, FMGE, NEET SS, INI-CET ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಗ್ರ ತಯಾರಿಗಾಗಿ ಭಾರತದ ಪ್ರಮುಖ ಆನ್ಲೈನ್ ಪ್ಲಾಟ್ಫಾರ್ಮ್ ಆಗಿದ್ದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತ ಶೈಕ್ಷಣಿಕ ವೇದಿಕೆಯಾಗಿದೆ. ಬಳಿಕ ಪ್ರೆಪ್ಲ್ಯಾಡರ್ ಆಪ್ ಕಾರ್ಯನಿರ್ವಾಹಕರಾದ ಅಕ್ಷಯ್ ಹಾಗೂ ಲಿಖಿತ್ ವಿದ್ಯಾರ್ಥಿಗಳಿಗೆ ಕ್ವಿಝ್ ನಡೆಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕ್ವಿಝ್ ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು. ಉಪನ್ಯಾಸಕರು ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿ ಪಾಲ್ಗೊಂಡಿದ್ದರು.