ನ್ಯೂಸ್ ನಾಟೌಟ್: ಸುಳ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಆಗಾಗ ಹಲವಾರು ವಿಶೇಷ ಶೈಕ್ಷಣಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ ಇದೀಗ ಅಂತಹದ್ದೇ ಒಂದು ವಿಶೇಷ ಕಾರ್ಯಕ್ರಮ ವಾಣಿಜ್ಯ ವಿಭಾಗದಿಂದ ಇಂಟರ್ ಕ್ಲಾಸ್ ಕಾಮರ್ಸ್ ಫೆಸ್ಟ್ “ಅದ್ವಿತೀಯ2K24” ಎಂಬ ಕಾರ್ಯಕ್ರಮ ಮಾರ್ಚ್ 27 ರಂದು ನಡೆಯಿತು.
ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 11 ತಂಡಗಳು ಭಾಗವಹಿಸಿದ್ದವು. ಹಣಕಾಸು, ಪೋಟೋಗ್ರಾಫಿ, ಉತ್ತಮ ನಿರ್ವಾಹಕ, ಉತ್ತಮ ಆಡಳಿತ ನಿರ್ವಹಣೆ, ಮಾರುಕಟ್ಟೆ ಮೊದಲಾದವುಗಳನ್ನು ತಮ್ಮ ಜೀವನದಲ್ಲಿ ಯಾವ ರೀತಿ ಅಳವಡಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ರುದ್ರಕುಮಾರ್. ಎಂ.ಎ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ.
ವೆಂಕಟ್ರಮಣ ಕ್ರೇಡಿಟ್ ಸೊಸೈಟಿ ಸುಳ್ಯ ಸಿಇಒ ಕೆ.ಟಿ ವಿಶ್ವನಾಥ ಮಾತನಾಡಿ ‘ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಬಹಳಷ್ಟಿದೆ ಇಲ್ಲಿ ಸಿಕ್ಕ ವಿಚಾರಗಳು ತಮ್ಮ ಜೀವನದಲ್ಲಿ ಪ್ರಯೋಜನವಾಗಬಹುದು’ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್.ಎಂ.ಎ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾಗಿರುವ ರತ್ನಾವತಿ. ಡಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಇಂತಹ ಫೆಸ್ಟ್ ಗಳ ಅಗತ್ಯತೆ ಇದೆ ಎಂದರು. ವೇದಿಕೆಯಲ್ಲಿ ಫೆಸ್ಟ್ ಸಂಚಾಲಕರುಗಳಾದ ಶ್ರೀಧರ್ ವಿ, ಗೀತಾ ಶೆಣೈ, ದಿವ್ಯ.ಟಿ.ಎಸ್ ಉಪಸ್ಥಿತರಿದ್ದರು. ಅಂತಿಮ ಬಿ.ಕಾಂ ವಿದ್ಯಾರ್ಥಿಗಳಾದ ಕುಮಾರಿ. ಅಂಕಿತ ಸ್ವಾಗತಿಸಿ. ಹೃತಿಕ್ ವಂದಿಸಿದರು. ಕುಮಾರಿ. ಆಯಿಷತ್ ತೌಶಿರ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ. ಕೃತಿಕಾ ಮತ್ತು ರತ್ನಸಿಂಚನ ಪ್ರಾರ್ಥಿಸಿದರು.