ನ್ಯೂಸ್ ನಾಟೌಟ್: ನೀವು ಕುಮ್ಕಿ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದೀರಾ..? ಇನ್ನೂ ನಿಮಗೆ ಕುಂಮ್ಕಿ ಜಮೀನಿನ ಹಕ್ಕಿನ ಮಂಜೂರಾತಿ ಆಗಿಲ್ವಾ..? ಈ ಚಿಂತೆಯಲ್ಲಿದ್ದವರಿಗೆ ಇದೀಗ ರಾಜ್ಯ ಹೈಕೋರ್ಟ್ ವಿಶೇಷ ತೀರ್ಪು ಪ್ರಕಟಿಸಿ ಕೊಂಚ ರಿಲ್ಯಾಕ್ಸ್ ನೀಡಿದೆ.
ಕುಮ್ಕಿ ಹಕ್ಕನ್ನು ಮಂಜೂರು ಮಾಡಬೇಕಿದ್ದರೆ 1990ಕ್ಕೂ ಹಿಂದಿನ ಅನಧಿಕೃತ ವಾಸ್ತವ್ಯವನ್ನು ಸಾಬೀತು ಮಾಡಬೇಕು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಸದ್ರಿ ಜಮೀನಿನಲ್ಲಿ ಅರ್ಜಿದಾರರು 14-04-1990ಗಿಂತಲೂ ಮುಂಚೆ ಅನಧಿಕೃತ ವಾಸ್ತವ್ಯ ಹೊಂದಿರುವುದನ್ನು ಸಾಬೀತು ಮಾಡಬೇಕು ನ್ಯಾಯಾಲಯ ಸೂಚಿಸಿದೆ. ನ್ಯಾ. ಎನ್. ಎಸ್. ಸಂಜಯ್ ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ. ಅದನ್ನು ಸಾಬೀತುಪಡಿಸದ ಹೊರತು ಅವರಿಗೆ ಈ ಜಮೀನಿನ ಕುಮ್ಕಿ ಹಕ್ಕುಗಳನ್ನು ಮಂಜೂರು ಮಾಡಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.