ನ್ಯೂಸ್ ನಾಟೌಟ್ :ಸಿಎಂ ಸಿದ್ದು ಸರ್ಕಾರ ಶಕ್ತಿ ಯೋಜನೆಯಡಿಯಲ್ಲಿ ಬಸ್ ಪ್ರಯಾಣಕ್ಕೆ ಮಹಿಳೆಯರಿಗೆ ಮಾತ್ರ ಫ್ರೀ ಕೊಟ್ಟಿರೋದು..ಅದು ಬಿಟ್ಟು ಬಸ್ ನಲ್ಲಿ ಪ್ರಾಣಿ-ಪಕ್ಷಿಗಳನ್ನು ಕೊಂಡೊಯ್ದರೆ ಆಗುತ್ತಾ..? ಹೌದು, ಬಸ್ ನಿರ್ವಾಹಕನೊಬ್ಬ ಬಸ್ನಲ್ಲಿ ಪ್ರಯಾಣಿಸಿದ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್ ಕೊಟ್ಟಿದ್ದು,ಅವರು ತೆಗೆದುಕೊಂಡು ಹೋದ ಪಕ್ಷಿಗಳಿಗೆ ಮಾತ್ರ ದುಡ್ಡು ಕೊಟ್ಟು ಪ್ರಯಾಣಿಸಿರುವ ರೋಚಕ ಘಟನೆ ಬಗ್ಗೆ ವರದಿಯಾಗಿದೆ.ಒಂದು ಪಕ್ಷಿಗೆ ೧೧೧ರಂತೆ ಟಿಕೇಟ್ ಕೊಟ್ಟಿರೋದನ್ನು ನೋಡಿ ಅಜ್ಜಿಗೆ ಶಾಕ್ ಆಗಿದೆ.
ಈ ಹಿಂದೆ ಕೋಳಿಗೆ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೂ ಕೂಡ ಅನೇಕ ಕಡೆ ಬಸ್ ಕಂಡಕ್ಟರ್ ಹಾಗೂ ಜನರ ನಡುವೆ ಗಲಾಟೆಗಳಾಗಿವೆ. ಪ್ರಾಣಿ – ಪಕ್ಷಿಗಳಿಗೆ ಟಿಕೆಟ್ ನೀಡದ ನಿರ್ವಾಹಕರು ಪರಿಶೀಲನೆ ವೇಳೆ ಸಿಕ್ಕಾಕಿಕೊಂಡು ಅಮಾನತು ಆದ ಉದಾಹರಣೆಗಳು ಇವೆ.ಇದೀಗ ಈ ನಾಲ್ಕು ಪಕ್ಷಿಗಳಿಗೆ ಬರೋಬ್ಬರಿ ೪೪೪ ರೂಪಾಯಿ ಕೊಟ್ಟು, ಇವರು ಫ್ರೀ ಟಿಕೆಟ್ ನಲ್ಲಿ ಪ್ರಯಾಣಿಸಿದ್ದಾರೆ.ಈ ಘಟನೆ ನಡೆದಿದ್ದು,ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ವೊಂದರಲ್ಲಿ.ಅಜ್ಜಿ – ಮೊಮ್ಮಗಳಿಗೆ ಶಕ್ತಿ ಯೋಜನೆಯ ಫ್ರೀ ಟಿಕೆಟ್ ಕೊಟ್ಟಿದ್ದು, ಅವರು ತೆಗೆದುಕೊಂಡು ಹೋಗುತ್ತಿದ್ದ ನಾಲ್ಕು ಪಕ್ಷಿಗಳಿಗೆ 444 ರೂ. ಮೌಲ್ಯದ ಟಿಕೆಟ್ ಅನ್ನು ಕಂಡಕ್ಟರ್ ಕೊಟ್ಟಿದ್ದಾರೆ. ಮಹಿಳೆ ಯಾಕೆ ಎಂದು ಕೇಳಿದರು ಕೂಡ ಟಿಕೆಟ್ ಕೊಟ್ಟಿದ್ದರಿಂದ ಅನಿವಾರ್ಯವಾಗಿ ದುಡ್ಡು ಕೊಟ್ಟು ಅಜ್ಜಿ – ಮೊಮ್ಮಗಳು ಬಸ್ನಲ್ಲಿ ಪ್ರಯಾಣ ಮುಂದುವರಿಸಿರುವ ಘಟನೆ ನಡೆದಿದೆ.
ಮಾರ್ಚ್ 27ರಂದು ಅವರು 4 ಲವ್ ಬರ್ಡ್ಸ್ಗಳನ್ನು ಪಂಜರದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಂಡಕ್ಟರ್ ಅಜ್ಜಿ – ಮೊಮ್ಮಗಳಿಗೆ ಶಕ್ತಿ ಯೋಜನೆಯಡಿ ಝೀರೋ ಟಿಕೆಟ್ ಕೊಟ್ಟಿದ್ದಾರೆ. ಆದರೆ, ನಾಲ್ಕು ಲವ್ ಬರ್ಡ್ಸ್ಗಳಿಗೆ ತಲಾ ಒಂದಕ್ಕೆ 111 ರೂ. ನಂತೆ ಒಟ್ಟು 444 ರೂ. ಟಿಕೆಟ್ ನೀಡಿದ್ದಾನೆ. ಪಕ್ಷಿಗಳನ್ನು ಮಕ್ಕಳಂತೆ ಪರಿಗಣಿಸಿ ಅರ್ಧ ಟಿಕೆಟ್ ಅನ್ನು ನಿರ್ವಾಹಕ ನೀಡಿದ್ದಾನಂತೆ..!
ಕೆಎಸ್ಆರ್ಟಿಸಿ ಪ್ರಕಾರ ಪ್ರಯಾಣಿಕರು ತಮ್ಮೊಂದಿಗೆ ಕರೆತರುವ ಯಾವುದೇ ಪ್ರಾಣಿ, ಪಕ್ಷಿ, ನಾಯಿಮರಿಗಳಿಗೆ ಅರ್ಧ ಟಿಕೆಟ್ ಅನ್ನು ಖರೀದಿ ಮಾಡಲೇಬೇಕು ಎಂಬ ನಿಯಮವಿದೆ. ಹಾಗೇನಾದರೂ ಟಿಕೆಟ್ ಖರೀದಿ ಮಾಡದೇ ಇದ್ದಲ್ಲಿ, ಪ್ರಯಾಣಿಕನಿಗೆ ಟಿಕೆಟ್ ಬೆಲೆಯ ಶೇ.10ರಷ್ಟು ದಂಡ ಹಾಗೂ ನಿರ್ವಾಹಕನಿಗೆ ಅಮಾನತು ಶಿಕ್ಷೆ ನೀಡಲಾಗುತ್ತದೆ. ಅದಲ್ಲದೇ ಕೆಎಸ್ಆರ್ಟಿಸಿಯ ಹಣ ದುರುಪಯೋಗಪಡಿಸಿಕೊಂಡ ಎಂದು ಕ್ರಿಮಿನಲ್ ಮೊಕದ್ದಮೆಯನ್ನು ಕೂಡ ನಿರ್ವಾಹಕನ ಮೇಲೆ ಹೂಡುವ ಅವಕಾಶವಿದೆ.ಹೀಗಾಗಿ ಬಸ್ ನಿರ್ವಾಹಕ ಕೂಡ ಏನೂ ಮಾಡಲಾಗದ ಪರಿಸ್ಥಿತಿ.ಟಿಕೆಟ್ ಕೊಡಲೇಬೇಕಾಗಿದೆ.