ನ್ಯೂಸ್ ನಾಟೌಟ್ : ವೃದ್ದೆ ನಡೆದುಕೊಂಡು ಹೋಗುತ್ತಿದ್ದಾಗ ಕೆ.ಎಸ್.ಆರ್.ಟಿ.ಸಿ ಡ್ರೈವರ್ ಬಸ್ ಹತ್ತಿಸಿದ ಘಟನೆಯೊಂದು ವರದಿಯಾಗಿದೆ.ಪರಿಣಾಮ ವೃದ್ದೆಯ ಕಾಲೇ ತುಂಡಾಗಿದೆ ಎಂದು ತಿಳಿದು ಬಂದಿದೆ.ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಎಂಬಲ್ಲಿ.
ಫೆಬ್ರವರಿ 27ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಳೆ ಭದ್ರಾವತಿ ಬಳೆಗಾರ ಬೀದಿ ನಿವಾಸಿಯಾದ ಚಂದ್ರಾಬಾಯಿ (52) ಎಂಬುವವರೇ ಬಲಗಾಲು ಕಳೆದುಕೊಂಡ ವೃದ್ದೆಯೆಂದು ತಿಳಿದು ಬಂದಿದೆ. ಈ ಭಯಾನಕ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮನಕಲಕುವಂತಿದೆ. ವೃದ್ಧೆಯೂ ಬಸ್ ಬರುವುದನ್ನು ಗಮನಿಸದೇ ನಡೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಏಕಾಏಕಿ ಬಂದ ಬಸ್ ವೃದ್ಧೆ ಮೇಲೆ ಹರಿದು ಬಿಟ್ಟಿದೆ. ಪರಿಣಾಮ ವೃದ್ಧೆಯೂ ತನ್ನ ಬಲಗಾಲನ್ನು ಕಳೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.