ನ್ಯೂಸ್ ನಾಟೌಟ್ : ಕಲ್ಕತಾ ಹೈಕೋರ್ಟ್ ಜಡ್ಜ್ ಅಭಿಶೇಕ್ ಗಂಗೋಪಾಧ್ಯಾಯ ಎಂಬವರು ಹೈಕೋರ್ಟ್ ಜಡ್ಜ್ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ನಿಂತ ಬಗ್ಗೆ ಖಚಿತಪಡಿಸಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ವಿರುದ್ಧ ಮಹತ್ವದ ನಿರ್ಧಾರ ತೆಗೆದುಕೊಂಡು ಜಟಾಪಟಿಗೆ ಕಾರಣವಾಗಿದ್ದ ಕೊಲ್ಕತ್ತಾ ಹೈಕೋರ್ಟ್ ಜಡ್ಜ್ ಅಭಿಜಿತ್ ಗಂಗೋಪಾದ್ಯಾಯ ಇದೀಗ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ತಮ್ಮ ರಾಜಕೀಯ ಪ್ರವೇಶವನ್ನು ಅಭಿಜಿತ್ ಗಂಗೋಪಾದ್ಯಯ ಖಚಿತಪಡಿಸಿದ್ದಾರೆ. ಲೋಕಸಭಾ ಚುನಾವಣೆಗೂ ಮೊದಲು ಬಿಜೆಪಿ ಸೇರಿಕೊಳ್ಳು ಸಾಧ್ಯತೆ ಎಂದು ಹೇಳಲಾಗಿದೆ.
ಮಾರ್ಚ್ 5 ರಂದು ಹೈಕೋರ್ಟ್ ಜಡ್ಜ್ ಸ್ಥಾನದಿಂದ ಹೊರಬರುವುದಾಗಿ ಅಭಿಜಿತ್ ಗಂಗೋಪಾದ್ಯ ಹೇಳಿದ್ದಾರೆ. ಆಡಳಿತರೂಢ ತೃಣಮೂಲ ಕಾಂಗ್ರೆಸ್ ಸತತವಾಗಿ ಸವಾಲು ಹಾಕಿತ್ತು. ಇದರಿಂದ ನಾನು ರಾಜಕೀಯ ಪ್ರವೇಶ ಮಾಡಲು ಸಾಧ್ಯವಾಯಿತು. ಇದಕ್ಕಾಗಿ ಟಿಎಂಸಿಗೆ ಧನ್ಯವಾದ ಹೇಳುತ್ತೇನೆ ಎಂದು ಅಭಿಜಿತ್ ಗಂಗೋಪಾಧ್ಯಾಯ ಹೇಳಿದ್ದಾರೆ. ಸದ್ಯ ಯಾವ ಪಕ್ಷಕ್ಕೆ ಸೇರಿಕೊಳ್ಳಬೇಕು ಅನ್ನೋ ಕುರಿತು ಚರ್ಚಿಸುತ್ತಿದ್ದೇನೆ.
ಆದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ. ಬಿಜೆಪಿ, ಕಾಂಗ್ರೆಸ್ ಅಥವಾ ಕಮ್ಯೂನಿಸ್ಟ್ ಪಕ್ಷಗಳ ಪೈಕಿ ಒಂದಕ್ಕೆ ಸೇರಿಕೊಳ್ಳುವ ಕುರಿತು ಚರ್ಚಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ತೃಣಮೂಲ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದಿದ್ದಾರೆ. ಈ ಮೂಲಕ ರಾಜಕೀಯ ಪ್ರವೇಶವನ್ನು ಅಭಿಜಿತ್ ಗಂಗೋಪಾಧ್ಯಾಯ ಖಚಿತಪಡಿಸಿದ್ದಾರೆ.