ನ್ಯೂಸ್ ನಾಟೌಟ್ : ಜೀವನದಲ್ಲಿ ನಾನು ಹಾಗಾಗಬೇಕು,ಹೀಗಾಗಬೇಕು,ಅದೊಂದು ಪ್ಲೇಸ್ ನೋಡಬೇಕು, ಆ ದೇಶಕ್ಕೆ ಹೋಗಬೇಕು ಎಂದು ಹಲವು ಕನಸು ಕಾಣೋದು ಸಹಜ. ಆದರೆ ಬಹುತೇಕರಿಗೆ ಆ ಕನಸು ಈಡೇರೋದು ಸ್ವಲ್ಪ ಕಷ್ಟ. ಆದರೆ, ಕರ್ನಾಟಕದ ಪುತ್ತೂರಿನ ಈ ಯುವಕ ಅದಕ್ಕೆಲ್ಲ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮನಸ್ಸಿದ್ದರೆ ಮಾರ್ಗ ಎಂದು ತಮ್ಮ ಸ್ಕಾರ್ಪಿಯೋ ಹತ್ತಿ 75 ದೇಶಗಳನ್ನು ಸುತ್ತುವ ಕನಸನ್ನು ಬೆಂಬತ್ತಿದ್ದಾರೆ.
ಹೌದು, ಈತ ಪುತ್ತೂರಿನ ದರ್ಬೆ ಮೂಲದ ಮಹಮ್ಮದ್ ಸಿನಾನ್ (29). ಈ ಪ್ರಯಾಣ ಕೈಗೊಂಡ ಕನಸಿಗ. ಎರಡು ವರ್ಷಗಳ ಕಾಲ ಮೂರು ಖಂಡಗಳಲ್ಲಿ 75 ದೇಶಗಳಲ್ಲಿ ಒಂದು ಲಕ್ಷ ಕಿಲೋಮೀಟರ್ ಪ್ರಯಾಣಿಸುವ ಗುರಿ ಹೊಂದಿರುವ ಸಿನಾನ್ ಈಗಾಗಲೇ 50 ದೇಶಗಳನ್ನು ನೋಡಿದ್ದಾನೆ.
ಸದ್ಯ ಅಮೆರಿಕ ತಲುಪಿರುವ ಸಿನಾನ್ ಪ್ರಯಾಣದ ಬಗ್ಗೆ ಬಿಜೆಪಿ ಮುಖಂಡ ಸದಾನಂದಗೌಡರು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ‘ಕನ್ನಡದ ಹುಡುಗ ಸಿನಾನ್ (United wander), ತನ್ನ ಸ್ಕಾರ್ಪಿಯೋ ಗಾಡಿಯಲ್ಲಿ ವಿಶ್ವದ ಹಲವು ದೇಶಗಳನ್ನು ಸುತ್ತಾಡಿ ಈಗ ಅಮೆರಿಕಾ ತಲುಪಿದ್ದಾನೆ. ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ಸು ಹೇಗಿದೆ ಅಂದರೆ ಕಬ್ಬಿಣದ ಮುಚ್ಚಳದಿಂದ ಹಿಡಿದು ಕೀಮೋಥೆರಪಿ ಮಾತ್ರಗಳ ತನಕ ಎಲ್ಲವೂ ಮೇಕ್ ಇನ್ ಇಂಡಿಯಾ !! ನಿಮ್ಮ ಕೋರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸುತ್ತೇನೆ’ ಎಂದಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ತಾವು ಈ ಪ್ರಯಾಣ ಕೈಗೊಂಡಿರುವುದಾಗಿ ಸಿನಾನ್ ಹೇಳುತ್ತಾರೆ. ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ ಸಿನಾನ್ ಹಲವು ಕನಸುಗಳನ್ನು ಹೊತ್ತಿದ್ದಾರೆ. ಯುಕೆನಲ್ಲಿ ಬಿಸ್ನೆಸ್ ಹೊಂದಿರುವ ಸಿನಾನ್ ರಸ್ತೆಯ ಮೂಲಕ 75 ದೇಶಗಳನ್ನು ಪ್ರಯಾಣಿಸುವ ಉದ್ದೇಶ ಈಡೇರುತ್ತಿದೆ.