ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಕೊನೆಯುಸಿರೆಳೆದ ಘಟನೆ ಬಗ್ಗೆ ವರದಿಯಾಗಿದೆ. ನಿಂತಿಕಲ್ಲಿನ ಅಲೆಕ್ಕಾಡಿಯ ಕೊಳಂಬಲ ನೆಕ್ಕರೆ ಎಂಬಲ್ಲಿ ಈ ಘಟನೆ ವರದಿಯಾಗಿದ್ದು, ನೆಕ್ಕರೆ ನಿವಾಸಿ ಚೆನ್ನಣ್ಣ ಗೌಡ(80 ವರ್ಷ) ದುರಂತ ಅಂತ್ಯ ಕಂಡವರೆಂದು ತಿಳಿದು ಬಂದಿದೆ.
ಇವರು ನಾಟಿ ವೈದ್ಯರಾಗಿಯೂ ಗುರುತಿಸಿ ಕೊಂಡಿದ್ದು, ಹಲವಾರು ರೋಗಗಳನ್ನು ವಾಸಿ ಮಾಡುವ ವಿಶೇಷ ನಾಟಿ ಮದ್ದಿನ ಬಗ್ಗೆ ಇವರಲ್ಲಿ ಮಾಹಿತಿಯಿತ್ತು ಎನ್ನಲಾಗಿದೆ.ಆದರೆ ಈ ಘಟನೆ ಹೇಗೆ ಸಂಭವಿಸಿತು ಎನ್ನೋದರ ಬಗ್ಗೆ ಸದ್ಯದಲ್ಲೇ ಮಾಹಿತಿ ಲಭ್ಯವಾಗಬೇಕಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.