ನ್ಯೂಸ್ ನಾಟೌಟ್: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿ.ಕೆ ಸುರೇಶ್ ಗುರುವಾರ(ಮಾ.೨೮) ನಾಮಪತ್ರ ಸಲ್ಲಿಸಿದ್ದಾರೆ. ರಾಮನಗರದಲ್ಲಿ ಕ್ಷೇತ್ರದ ಬೆಂಬಲಿಗರೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಕೆ ಮಾಡಿರುವ ಸುರೇಶ್ ತಮ್ಮ ಆಸ್ತಿ ವಿವರ ನೀಡಿದ್ದಾರೆ.
ಡಿ.ಕೆ ಸುರೇಶ್ ಅವರು 593 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರುವುದಾಗಿ ನಮೂದಿಸಿದ್ದಾರೆ. ಅಫಿಡವಿಟ್ ಪ್ರಕಾರ 2019 ರಿಂದ ಕಳೆದ 5 ವರ್ಷಗಳಲ್ಲಿ ಡಿ.ಕೆ. ಸುರೇಶ್ ಆಸ್ತಿಯಲ್ಲಿ ಸುಮಾರು 259.19 ಕೋಟಿ ರೂಪಾಯಿ ಏರಿಕೆ ಆಗಿದೆ.
ಚರಾಸ್ತಿ: 106.71 ಕೋಟಿ ರೂ.
ಸ್ಥಿರಾಸ್ತಿ: 486.33 ಕೋಟಿ ರೂ.
ಒಡವೆ: 1260 ಗ್ರಾಂ ಚಿನ್ನಾಭರಣ, 4.86 ಕೆಜಿ ಬೆಳ್ಳಿ
ಸಾಲ: 150.06 ಕೋಟಿ ರೂ.
ಸ್ವಂತ ಕಾರು: ಇಲ್ಲ
ಒಟ್ಟು ಆಸ್ತಿ: 593.05 ಕೋಟಿ ರೂ.
2019 ರಲ್ಲಿದ್ದ ಒಟ್ಟು ಆಸ್ತಿ: 333.86 ಕೋಟಿ ರೂ. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಡಿ.ಕೆ.ಸುರೇಶ್, ”ನಾಲ್ಕನೇ ಬಾರಿಗೆ ಇಂದು ನಾಮಪತ್ರ ಸಲ್ಲಿಸಿದ್ದೇನೆ. ಕ್ಷೇತ್ರದ ಜನರ ಜೊತೆಯಿದ್ದು ಕಷ್ಟ-ಸುಖ ಆಲಿಸಿದ್ದೇನೆ. ಗ್ರಾಮೀಣ ಭಾಗದಲ್ಲಿ ಜನರ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇನೆ. ನನ್ನ ಕೆಲಸ, ಹೋರಾಟಕ್ಕೆ ಜನ ಬೆಂಬಲವಿದೆ. ಕೆಲಸಕ್ಕೆ ಜನರು ಕೂಲಿ ಕೊಡುತ್ತಾರೆ ಎಂಬ ನಂಬಿಕೆಯಿದೆ. ನನ್ನ ಕೆಲಸಗಳೇ ಕೈ ಹಿಡಿಯುತ್ತವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.