ನ್ಯೂಸ್ ನಾಟೌಟ್: ನಕಲಿ ನೋಟು ದಂಧೆಯನ್ನು ಭೇದಿಸಿದ ಪೊಲೀಸರು ಕೆಲ ದಿನಗಳ ಹಿಂದೆ ಆರು ಮಂದಿಯನ್ನು ಬಂಧಿಸಿದ್ದರು. ಈ ಆರೋಪಿಗಳು ನಕಲಿ ನೋಟು ಮುದ್ರಣಕ್ಕೆ ಕಾಗದ ಮತ್ತು ಇತರ ಕಚ್ಚಾ ವಸ್ತುಗಳನ್ನು ಚೀನಾದ ಇ-ಕಾಮರ್ಸ್ ಪೋರ್ಟಲ್ ಒಂದರಿಂದ ಖರೀದಿಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಈ ಘಟನೆ ಮಹಾರಾಷ್ಟ್ರದ ಪುಣೆಗೆ ಸಮೀಪದ ಪಿಂಪ್ರಿ ಚಿಂಚ್ ವಾಡ್ನಲ್ಲಿ ನಡೆದಿತ್ತು. ನೋಟುಗಳನ್ನು ಮುದ್ರಿಸುತ್ತಿದ್ದ ಆರೋಪಿಗಳಿಂದ 500 ರೂಪಾಯಿ ಮುಖಬೆಲೆಯ 400 ಕ್ಕೂ ಹೆಚ್ಚು ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫೆಬ್ರವರಿ 25 ರಂದು ಪೊಲೀಸರು ಹೃತಿಕ್ ಖಡ್ಸೆ ಎಂಬಾತನನ್ನು ಬಂಧಿಸಿ ಆತನಿಂದ 500 ರೂ ಮುಖಬೆಲೆಯ 140 ನೋಟುಗಳನ್ನು ವಶಪಡಿಸಿಕೊಂಡ ನಂತರ ಈ ದಂಧೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
“ಡಿಘಿಯಲ್ಲಿ (ಪಿಂಪ್ರಿ ಚಿಂಚ್ ವಾಡ್ನಲ್ಲಿ) ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸಿರುವುದಾಗಿ ಆರೋಪಿಗಳು ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾರೆ. ಇನ್ನೂ ಐದು ಜನ ಈ ನಕಲಿ ನೋಟುಗಳ ಮುದ್ರಣ ಜಾಲದಲ್ಲಿ ಭಾಗಿಯಾಗಿರುವುದು ದಾಳಿಯ ಸಮಯದಲ್ಲಿ ಕಂಡುಬಂದಿದೆ ಮತ್ತು ಆರೋಪಿಗಳಿಂದ 500 ರೂಪಾಯಿ ಮುಖಬೆಲೆಯ 440 ನೋಟುಗಳು, 4,684 ಭಾಗಶಃ ಮುದ್ರಿತ ನೋಟುಗಳು ಮತ್ತು ಒಂದು ಸಾವಿರ ಭಾರತೀಯ ಕರೆನ್ಸಿ ಪೇಪರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಿಂಟರ್, ಲ್ಯಾಪ್ ಟಾಪ್, ಭಾರತೀಯ ಕರೆನ್ಸಿ ಪೇಪರ್, ಶಾಯಿ, ಕಾಗದ ಕತ್ತರಿಸುವ ಯಂತ್ರ ಮತ್ತು ಇತರ ವಸ್ತುಗಳನ್ನು ಸಹ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿತರಲ್ಲಿ ಓರ್ವ ಚೀನಾದ ಇ- ಕಾಮರ್ಸ್ ವೆಬ್ ಸೈಟ್ನಲ್ಲಿ ಖಾತೆ ತೆರೆದು ಆ ದೇಶದಿಂದ ನೋಟು ಮುದ್ರಿಸಲು ಕರೆನ್ಸಿ ಪೇಪರ್ ಅನ್ನು ಆರ್ಡರ್ ಮಾಡಿದ್ದ ಎಂದು ತಿಳಿದುಬಂದಿದೆ.