ನ್ಯೂಸ್ ನಾಟೌಟ್: ಹೊಟೆಲ್ ಒಂದರಲ್ಲಿ ವಸ್ತುವೊಂದು ಸ್ಫೋಟಗೊಂಡು ಮೂವರು ಸಿಬ್ಬಂದಿ ಸೇರಿ ಐವರು ಗಂಭೀರ ಗಾಯಗೊಂಡ ಘಟನೆ ವೈಟ್ಫೀಲ್ಡ್ ಸಮೀಪದ ಕುಂದಲಹಳ್ಳಿ ಗೇಟ್ ಬಳಿಯ ಬಸ್ ನಿಲ್ದಾಣದ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ನಡೆದಿದೆ.ಸ್ಫೋಟದ ತೀವ್ರತೆಗೆ ರಾಮೇಶ್ವರಂ ಕೆಫೆ ಹಾನಿಯಾಗಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ.
ಕೆಫೆಗೆ ಬಂದಿದ್ದ ಅಪರಿಚಿತ ವ್ಯಕ್ತಿಯ ಬ್ಯಾಗ್ನಲ್ಲಿದ್ದ ಸ್ಫೋಟಕ ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಸ್ಫೋಟಗೊಳ್ಳುತ್ತಿದ್ದ ಭಯಭೀತರಾಗಿದ್ದ ಓಡಿಹೋದ ಜನರು. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿದ್ದು ಬೆಂಕಿ ನಂದಿಸಿದ್ದಾರೆ.ಕೆಫೆಗೆ ಬಂದಿದ್ದ ವ್ಯಕ್ತಿಯ ಬ್ಯಾಗ್ನಲ್ಲಿ ಸ್ಫೋಟಕ ಇತ್ತು ಎಂದು ಹೇಳಲಾಗಿದೆ. ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟ ಕೂಡ ಆಗಿರಬಹುದೆಂದು ಕೂಡ ಅಂದಾಜಿಸಲಾಗಿದೆ. ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.