ನ್ಯೂಸ್ ನಾಟೌಟ್: ಬಿಜೆಪಿ ಹಿರಿಯ ನಾಯಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದಯಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದೆ. ಈ ಕೇಸಿನ ಬಗ್ಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿಯವರು, ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿದೆ. ತನಿಖೆಯಲ್ಲಿ ಯಡಿಯೂರಪ್ಪನವರ ತಪ್ಪು ಸಾಬೀತಾದರೆ ಅವರು ಶಿಕ್ಷೆಗೆ ಗುರಿಯಾಗುತ್ತಾರೆ.
ವರದಿ ಬಂದರೆ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದರು. ಯಡಿಯೂರಪ್ಪನವರ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ತನಿಖೆಯಿಂದ ಸರಿ ಇದ್ದರೆ ಸರಿ, ತಪ್ಪಿದ್ದರೆ ತಪ್ಪು. ಕಾನೂನಿಗೆ ಯಾರು ಹೊರತಲ್ಲ. ತಪ್ಪು ಸಾಬೀತಾದರೆ ಪೊಕ್ಸೊ ಅಡಿಯಲ್ಲಿ ಶಿಕ್ಷೆಗೆ ಒಳಗಾಗುತ್ತಾರೆ. ತನಿಖಾ ವರದಿ ಸಲ್ಲಿಕೆ ಬಳಿಕ ಎಲ್ಲವು ತಿಳಿಯಲಿದೆ ಎಂದು ತಿಳಿಸಿದರು.
ದೂರು ನೀಡಿರುವ ಹೆಣ್ಣು ಮಗಳು ಕೆಲವು ಬಾರಿ ಸಹಾಯ ಕೇಳಿ ಕೊಂಡು ನಮ್ಮ ಬಳಿ ಬಂದಿದ್ದರು. ಅದರಂತೆಯ ಇತ್ತೀಚೆಗೆ ತಾಯಿ ಮಗಳ ಮನೆಗೆ ಬಂದಾಗ ಕೂರಿಸಿ ಸಹಾಯ ಮಾಡಲು ಮಾತನಾಡಿದ್ದೆ. ಸಮಸ್ಯೆ ಇದೆ ಎಂದಾಗ ಪೊಲೀಸರ ಬಳಿ ನಾನೇ ಅವರನ್ನು ಕಳುಹಿಸಿದ್ದೆ. ಅಲ್ಲಿಗೆ ಹೋದ ಮೇಲೆ ಉಪಕಾರ ಮಾಡದವರ ಮೇಲೆ ರೀತಿ ಆರೋಪ ಮಾಡಿದ್ದಾರೆ. ಈ ಆರೋಪಗಳು ಆಧಾರರಹಿತವಾದವು. ಏನೇ ತನಿಖೆ ಇದ್ದರೂ ನಾನು ಎದುರಿಸಲು ಸಿದ್ಧ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.