ನ್ಯೂಸ್ ನಾಟೌಟ್:ಎಸ್ಎಸ್ಎಲ್ಸಿ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿರುವ ಘಟನೆ ಬಗ್ಗೆ ಮಾರ್ಚ್ 20ರಂದು ವರದಿಯಾಗಿದೆ. ರಾಕೇಶ್ ಕಿಡ್ನಾಪ್ ಆದ ವಿದ್ಯಾರ್ಥಿಯೆಂದು ತಿಳಿದು ಬಂದಿದೆ.
ಶಿವಮೊಗ್ಗದ ರಾಜೇಂದ್ರ ನಗರ 100 ಅಡಿ ರಸ್ತೆ ಬಳಿ ಇರುವ ಖಾಸಗಿ ಶಾಲೆಯಿಂದ ಸಂಜೆ ಮನೆಗೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಡ್ರಾಪ್ ಕೊಡುವುದಾಗಿ ಹೇಳಿ ಇಬ್ಬರು ಅನ್ಯಕೋಮಿನ ಯುವಕರಿಂದ ಕಿಡ್ನಾಪ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಶಿವಮೊಗ್ಗ ಹೊರವಲಯದ ಕಲ್ಲುಗಂಗೂರು ಬಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಯುವಕರು ವಿದ್ಯಾರ್ಥಿಯ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ತಿಳಿದು ಬಂದಿದೆ.
ಈ ವೇಳೆ ವಿದ್ಯಾರ್ಥಿಗೆ ಕಿವಿಗೆ ಕಚ್ಚಿ ಗಾಯ ಮಾಡಿದ್ದು,ಗಾಯಗೊಂಡ ವಿದ್ಯಾರ್ಥಿಯನ್ನು ಯುವಕರು ಸ್ಥಳದಲ್ಲೇ ಬಿಟ್ಟು ಪರಾರಿ ಆಗಿದ್ದಾರೆ. ಸ್ಥಳೀಯರ ಸಹಾಯದಿಂದ ವಿದ್ಯಾರ್ಥಿಯನ್ನು ಆಸ್ಪತ್ರೆ ದಾಖಲು ಮಾಡಲಾಗಿದೆ. ಬಳಿಕ ಪೋಷಕರಿಗೆ ಘಟನೆ ಕುರಿತು ಮಾಹಿತಿ ನೀಡಲಾಗಿದೆ.