ನ್ಯೂಸ್ ನಾಟೌಟ್: ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ- ರಾಧಿಕಾ ಮದುವೆಯದ್ದೇ ಎಲ್ಲೆಡೆ ಸುದ್ದಿ. ಇದರಲ್ಲಿ ಬಹುತೇಕ ಎಲ್ಲಾ ಬಾಲಿವುಡ್ ನಟ-ನಟಿಯರೂ ಭಾಗವಹಿಸಿ, ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟಕ್ಕೂ ಇವರೇನು ಮದುವೆಯಲ್ಲಿ ಖುಷಿಯಿಂದ ಕುಣಿದವರಲ್ಲ. ಇಂಥ ಮದುವೆಗಳಲ್ಲಿ ಕುಣಿಯುವುದಕ್ಕಾಗಿಯೇ ಹಲವು ನಟ-ನಟಿಯರು ಕೋಟಿ ಕೋಟಿಗಟ್ಟಲೆ ಹಣವನ್ನು ಪಡೆದುಕೊಳ್ಳುತ್ತಾರೆ.
ಆದರೆ ನೋಡುಗರಿಗೆ ಮಾತ್ರ ಅವರು ಮದುವೆಯ ದಿನ ತಮ್ಮ ಇಷ್ಟದಿಂದ ಖುಷಿಯಾಗಿ ಕುಣಿದರು ಎಂದೇ ಕಾಣಿಸುವುದು ಉಂಟು. ಇದೇ ಕಾರಣಕ್ಕೆ ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಕೂಡ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದರು. ಎರಡು ತಿಂಗಳ ಗರ್ಭಿಣಿಯಾದರೂ ದುಡ್ಡಿನ ಆಸೆಗೆ ಬಿದ್ದು ಪತಿಯ ಜೊತೆ ಭರ್ಜರಿ ಸ್ಟೆಪ್ ಹಾಕಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯೂ ಆಗಿತ್ತು ಎನ್ನಲಾಗಿದೆ. ಅದೇ ಇನ್ನೊಂದೆ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಒಟ್ಟಿಗೇ, ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದೂ ಸದ್ದು ಮಾಡುತ್ತಿದೆ.
ಈ ಬಗ್ಗೆ ಟಾಂಗ್ ಕೊಟ್ಟಿರೋ ಕಾಂಟ್ರವರ್ಸಿ ಲೇಡಿ ಕಂಗನಾ ರಣಾವತ್ ಯಾರ ಹೆಸರನ್ನೂ ಉಲ್ಲೇಖಿಸದೇ, ಇದೇ ವಿಷಯವನ್ನು ಕೆದಕಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಟಿ, ಹಿರಿಯ ಗಾಯಕಿ, ದಿವಂತರ ಲತಾ ಮಂಗೇಶ್ಕರ್ ಅವರ ಹಳೆಯ ಸಂದರ್ಶನವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಲತಾ ಅವರು ಲಕ್ಷಾಂತರ ಆಫರ್ ನೀಡಿದರೂ ಮದುವೆಯಲ್ಲಿ ತಾವು ಹಾಡುವುದಿಲ್ಲ ಎಂದು ಹೇಳಿದ್ದರು. ಇದನ್ನೇ ಹೇಳಿರುವ ಕಂಗನಾ, ತಮ್ಮನ್ನು ಲತಾ ಅವರಿಗೆ ಹೋಲಿಸಿಕೊಂಡಿದ್ದಾರೆ. ಹಲವರಿಗೆ ಹೇಗಾದರೂ ಮಾಡಿ, ಯಾವುದೇ ಮೂಲೆಗಳಿಂದ ಸಂಪತ್ತನ್ನು ಗಳಿಸುವ ಹಂಬಲ.
ಆದರೆ ನಾನು ಹಾಗಲ್ಲ, ಇಂಥ ಆಮಿಷಗಳಿಗೆ ನಾನು ಒಳಗಾಗುವವಳಲ್ಲ. ಎಷ್ಟೇ ಆಮಿಷಗಳನ್ನು ಪಡೆದರೂ ನಾನು ಮದುವೆಯಲ್ಲಿ ಎಂದಿಗೂ ನೃತ್ಯ ಮಾಡಲಿಲ್ಲ, ಅನೇಕ ಸೂಪರ್ ಹಿಟ್ ಐಟಂ ಸಾಂಗ್ಗಳಿಗೆ ನರ್ತಿಸುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ನಾನು ಅದಕ್ಕೆ ಒಪ್ಪಿದವಳಲ್ಲ. ಇಂಥ ಷಾರ್ಟ್ಕಟ್ ಮಾರ್ಗ ಅನುಸರಿಸಿ ಹಣ ಮಾಡುವ ಜಾಯಮಾನ ನನ್ನದಲ್ಲ ಎಂದಿದ್ದಾರೆ ಎಂದು ಅಂಬಾನಿ ಮಗನ ಪ್ರಿ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ನೃತ್ಯ ಮಾಡಿದ ನಟರ ಬಗ್ಗೆ ಟೀಕಿಸಿದ್ದಾರೆ.