ನ್ಯೂಸ್ ನಾಟೌಟ್: ಬೆಳ್ಳುಳ್ಳಿ ಕಬಾಬ್ ಮಾಡ್ಕೊಳಿ ತಿನ್ಕೊಳಿ ಅಂತ ರೆಸಿಪಿಗಳ ವಿಡಿಯೋ ಮಾಡ್ತಿದ್ದ ಚಂದ್ರು, ಕರಿಮಣಿ ಮಾಲೀಕಾ ರಾವುಲ್ಲಾ ಅಂತ ಟೈಲಾಗ್ ಹೇಳ್ತಾ ಫೇಮಸ್ ಆದವರು ಈಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ಸ್ಟಾಗ್ರಾಮ್ ನಲ್ಲಿ ಅಪಾರ ಫಾಲೋವರ್ಸ್ ಹೊಂದಿರುವ ಚಂದ್ರು ಇದೀಗ ಹಾಸಿಗೆ ಹಿಡಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚಂದ್ರು ವಿಡಿಯೋ ಸಿಕ್ಕಪಟ್ಟೆ ಸದ್ದು ಮಾಡುತ್ತಿದ್ದು ಈಗ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಹೋಟೆಲ್ ಹತ್ತಿರ ಕಾಲು ಜಾರಿ ಬಿದ್ದೆ. ಮೂಳೆ ಮುರಿದಿದೆ ಅಂತ ಡಾಕ್ಟರ್ ಹೇಳಿದ್ರು. ವಯಸ್ಸಾಗಿದೆ ರಿಸ್ಜ್ ಬೇಡ ಅಂತ ಆಪರೇಷನ್ ಮಾಡಿಸಿಕೊಂಡು ರೆಸ್ಟ್ ಮಾಡ್ತಿದ್ದೀನಿ ಎಂದು ಬೆಳ್ಳುಳ್ಳಿ ಕಬಾಬ್ ಚಂದ್ರು ಹೇಳಿಕೊಂಡಿದ್ದಾರೆ.
ಉಪ್ಪಿ ಯುಐ ಚಿತ್ರದ ಹಾಡಿನ ಬಗ್ಗೆ ಬೆಳ್ಳುಳ್ಳಿ ಕಬಾಬ್ ಚಂದ್ರು ಸಂತಸ ವ್ಯಕ್ತಪಡಿಸಿದ್ದಾರೆ. ಹಾಡನ್ನು ಬರೆಯೋಕು ಮುನ್ನ ನನಗೆ ಉಪ್ಪಿ ಸರ್ ಕಾಲ್ ಮಾಡಿ ಕೇಳಿದ್ರು. ನಾನು ನಿಮ್ಮಿಷ್ಟ ಬಂದ ಹಾಗೇ ಮಾಡಿಕೊಳ್ಳಿ ಸರ್ ಅಂತ ಹೇಳ್ದೆ. ಮೊನ್ನೆ ಹಾಡು ಕಳ್ಸಿದ್ರು ನೋಡಿದೆ, ಹಾಡು ತುಂಬಾ ಚೆನ್ನಾಗಿ ಬಂದಿದೆ. ಜನರು ಎಲ್ಲೇ ಹೋದ್ರು ಪ್ರೀತಿಯಿಂದ ಮಾತಾಡಿಸ್ತಾರೆ.
ನನ್ನ ಈ ಬೆಳವಣಿಗೆಯನ್ನ ನಮ್ಮಬಾಸ್ ಅಪ್ಪು ನೋಡಿದ್ರೆ ಸಂತಸ ಪಡ್ತಿದ್ರು. ನಾನು ಮಾಲಾಶ್ರೀ ಮೇಡಂ ಅವ್ರಿಗೆ ಮೇಕಪ್ ಮಾಡ್ತಿದ್ದೆ. ನನ್ನ ವಿಡಿಯೋ ವೈರಲ್ ಆದ ಮೇಲೆ ಮಾಲಾಶ್ರೀ ಮೇಡಂ ಕಾಲ್ ಮಾಡಿದ್ರು. ಏನ್ ಚಂದ್ರು, ಈ ರೀತಿ ವೈರಲ್ ಆಗಿದ್ದೀರಾ ಎಂದು ಅಂದಿದ್ದಾರೆ. ಅಡುಗೆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಾ ಬೆಳ್ಳುಳ್ಳಿ ಕಬಾಬ್ ಚಂದ್ರು ಫುಲ್ ಫೇಮಸ್ ಆಗಿದ್ದಾರೆ.