ನ್ಯೂಸ್ ನಾಟೌಟ್: ಮುಂದಿನ ತಿಂಗಳು ಏಪ್ರಿಲ್ನಲ್ಲಿ 14 ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ ತಿಂಗಳ ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಹಂಚಿಕೊಂಡಿದೆ. ಈ ಪಟ್ಟಿಯ ಪ್ರಕಾರ ಮುಂಬರುವ ತಿಂಗಳಲ್ಲಿ 14 ದಿನಗಳವರೆಗೆ ಬ್ಯಾಂಕುಗಳುಳಿಗೆ ರಜೆಯಿದೆ. ಇತ್ತೀಚೆಗೆ ಆರ್ಬಿಐ ಮಾರ್ಚ್ 31 ರ ಭಾನುವಾರ ಕೂಡ ಬ್ಯಾಂಕ್ಗಳಿಗೆ ರಜೆಯಿಲ್ಲ. ಕೆಲಸ ಮಾಡಬೇಕು ಎಂದು ಘೋಷಿಸಿದೆ.
ಹಣಕಾಸು ವರ್ಷದ ಮುಕ್ತಾಯವಾಗಿರುವುದಿಂದ ವಾರ್ಷಿಕ ಲೆಕ್ಕಪತ್ರಗಳ ಕೆಲಸ ಹೆಚ್ಚಾಗಿದೆ. ಇದೆ ಕಾರಣಕ್ಕೆ ಮಾರ್ಚ್ 30 ರ ಶನಿವಾರ ಮತ್ತು ಮಾರ್ಚ್ 31ರ ಭಾನುವಾರ ಆರ್ಬಿಐ ಕಚೇರಿಗಳು ಓಪನ್ ಇರಲಿವೆ.
ಏಪ್ರಿಲ್ 1, 2024: ಏಪ್ರಿಲ್ 1 ರಂದು ಬ್ಯಾಂಕುಗಳು ಮುಚ್ಚಿರಲಿದೆ. ಆದರೆ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೋರಾಂ, ಚಂಡೀಗಢ, ಸಿಕ್ಕಿಂ ಮತ್ತು ಮೇಘಾಲಯದಂತಹ ಕೆಲವು ರಾಜ್ಯಗಳಲ್ಲಿ ಬ್ಯಾಂಕ್ಗಳು ಕಾರ್ಯನಿರ್ವಹಿಸಲಿವೆ.
ಏಪ್ರಿಲ್ 5, 2024: ಬಾಬು ಜಗಜೀವನ್ ಮತ್ತು ಜುಮಾ-ಉಲ್-ವಿದಾ ಅವರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು, ತೆಲಂಗಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್ಗಳು ಬಂದ್ ಇರಲಿವೆ.
ಏಪ್ರಿಲ್ 9, 2024: ಗುಡಿ ಪಾಡ್ವಾ, ಯುಗಾದಿ ಹಬ್ಬ, ತೆಲುಗು ಹೊಸ ವರ್ಷದ ದಿನ ಆಚರಣೆಗಳ ಕಾರಣ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಹೈದರಾಬಾದ್- ಆಂಧ್ರಪ್ರದೇಶ, ಹೈದರಾಬಾದ್ – ತೆಲಂಗಾಣ, ಮಣಿಪುರ, ಗೋವಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 9 ರಂದು ಬ್ಯಾಂಕ್ ರಜೆ ಘೋಷಿಸಲಾಗಿದೆ.
ಏಪ್ರಿಲ್ 10, 2024: ರಂಜಾನ್-ಈದ್ (ಈದ್-ಉಲ್-ಫಿತರ್) ಕಾರಣದಿಂದ ಏಪ್ರಿಲ್ 10 ರಂದು ಬ್ಯಾಂಕ್ಗಳಿಗೆ ರಜೆ ಘೋಷಿಸಲಾಗಿದೆ.
ಏಪ್ರಿಲ್ 11 , 2024: ಚಂಡೀಗಢ, ಸಿಕ್ಕಿಂ, ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿ ಏಪ್ರಿಲ್ 11 ರಂದು ರಂಜಾನ್-ಈದ್ (ಈದ್-ಉಲ್-ಫಿತರ್) ಆಚರಿಸಲಾಗುತ್ತದೆ. ಹೀಗಾಗಿ ಏಪ್ರಿಲ್ 11 ರಂದು ಈ ರಾಜ್ಯಗಳಲ್ಲಿ ಬ್ಯಾಂಕ್ ರಜೆ.
ಏಪ್ರಿಲ್ 13, 2024: ಬೊಹಾಗ್ ಬಿಹು, ಚೀರೋಬಾ, ಬೈಸಾಖಿ, ಬಿಜು ಉತ್ಸವ ಈ ಬಾರಿ ಎರಡನೇ ಶನಿವಾರದಂದು ಬಂದಿದೆ. ಹೀಗಾಗಿ ಅಸ್ಸಾಂ, ಮಣಿಪುರ, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ.
ಏಪ್ರಿಲ್ 16, 2024: ರಾಮ ನವಮಿಯ ಶುಭ ಸಂದರ್ಭದಲ್ಲಿ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ, ಚಂಡೀಗಢ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶದ ಬ್ಯಾಂಕ್ಗಳಿಗೆ ರಜೆ ಘೋಷಿಸಲಾಗಿದೆ.