ನ್ಯೂಸ್ ನಾಟೌಟ್: ಅಯೋಧ್ಯಾ ಶ್ರೀರಾಮನ ದರ್ಶನಕ್ಕೆ ಹೊರಟಿದ್ದ ವೇಳೆ ಅಪ * ಘಾತಕ್ಕೀಡಾಗಿ ವಿದ್ಯಾರ್ಥಿಯೊಬ್ಬ ಕೊನೆಯುಸಿರೆಳೆದಿದ್ದು, ಆತನ ಅಂಗಾಂಗಗಳನ್ನು ಇಬ್ಬರು ರೋಗಿಗಳಿಗೆ ಕಸಿ ಮಾಡಿ ಜೀವದಾನ ಮಾಡಿದ ಘಟನೆ ವರದಿಯಾಗಿದೆ.
ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಮೂಲದ ದೇವಾಂಶ್ ಜೋಶಿ (21) ಕೊನೆಯುಸಿರೆಳೆದ ವಿದ್ಯಾರ್ಥಿ ಎಂದು ಗುರುತಿಸಲಾಗಿದ್ದು, ಈತ ಇಲ್ಲಿನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಫೆಬ್ರವರಿ 28 ರಂದು ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ತೆರಳುತ್ತಿದ್ದ. ಈ ವೇಳೆ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ ಜೋಶಿ ತಲೆಗೆ ತೀವ್ರ ಪೆಟ್ಟಾಗಿತ್ತು. ತಕ್ಷಣವೇ ಆತನನ್ನು ಇಂದೋರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಪಾಸಣೆ ನಡೆಸಿದ ವೈದ್ಯರು ಮೆದುಳು ನಿಷ್ಕ್ರಿವಾಗಿದ್ದನ್ನು ಗುರುತಿಸಿದ್ದಾರೆ. ಚಿಕಿತ್ಸೆ ನೀಡಿದರೂ, ಬದುಕುಳಿಯಲಾರ ಎಂದು ದೃಢವಾದ ಬಳಿಕ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅಂಗಾಂಗ ದಾನ ಪಡೆಯಲಾಗಿದೆ. ಮಗ ಬ್ರೇನ್ ಡೆಡ್ನಿಂದ ಇನ್ನು ಬದುಕಲಾರ ಎಂದು ತಿಳಿದ ಕುಟುಂಬಸ್ಥರು, ಆತನ ಅಂಗಗಳು ಬೇರೊಬ್ಬರ ಜೀವ ಕಾಪಾಡಲಿ ಎಂದು ಆಶಿಸಿ, ಕಿಡ್ನಿ ಮತ್ತು ಮೂತ್ರಪಿಂಡವನ್ನು ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಅದರಂತೆ ಇಲ್ಲಿನ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಸರ್ಕಾರಿ ಕಾಲೇಜಿನಲ್ಲಿ ಚಿಕಿತ್ಸೆ ನಡೆಸಿ ಅಂಗಾಂಗಗಳನ್ನು ಪಡೆಯಲಾಗಿದೆ. ರಾಮಭಕ್ತ ಜೋಶಿಯ ಅಂಗದಲ್ಲಿನ ಕಿಡ್ನಿ ಮತ್ತು ಮೂತ್ರಪಿಂಡವನ್ನು ಪಡೆದ ವೈದ್ಯರು ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡಿದ್ದಾರೆ. ಇದರಿಂದ ಅವರಿಬ್ಬರು ಮರುಜೀವ ಪಡೆದಿದ್ದಾರೆ. ವಿಶೇಷವೆಂದರೆ, ಕೊನೆಯುಸಿರೆಳೆದ ಜೋಶಿ ಒಂದೇ ಜನ್ಮತಾ ಒಂದೇ ಯಕೃತ್ತು ಹೊಂದಿದ್ದ. ಆತನ ಹೃದಯವು ಕಸಿ ಮಾಡಲು ಯೋಗ್ಯವಾಗಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.