ನ್ಯೂಸ್ ನಾಟೌಟ್ : ಬೆಂಗಳೂರು , ಮುಂಬೈಯಂತಹ ಮಹಾನಗರಗಳಲ್ಲಿ ಟ್ರಾಫಿಕ್ ಜಾಂನದ್ದೇ ಕಿರಿ ಕಿರಿ..ಸುಸ್ತಾಗಿ ಹೋಗುವಷ್ಟು ಟ್ರಾಫಿಕ್, ಅದರ ಜತೆಗೆ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ.. ಹೀಗಾಗಿ ಇಂತಹ ನಗರಗಳಲ್ಲಿ ಓಡಾಡುವುದನ್ನೇ ಜನ ನಿರಾಕರಿಸುತ್ತಾರೆ.
ಹೀಗೆ ಇದೀಗ ಜೀವನವೇ ಒಂದು ಒತ್ತಡವಾಗಿ ಪರಿಣಮಿಸಿದೆ .ಸಾಮಾನ್ಯವಾಗಿ ಕೆಲಸದ ಒತ್ತಡ ಇರುವ ಉದ್ಯೋಗಿ ಆಫೀಸು ಕ್ಯಾಬಿನಲ್ಲಿ, ಅಥವಾ ಹೋಟೆಲ್ ಇನ್ನಿತರ ಸ್ಥಳಗಳಲ್ಲಿ ಕುಳಿತು ಕೆಲಸ ಮಾಡುವವರನ್ನು ಕಾಣಬಹುದು. ಅದರಲ್ಲೂ ಬೆಂಗಳೂರಿನಂತ ನಗರದಲ್ಲಿ ಇಂತಹ ದೃಶ್ಯ ಕಾಣಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಸ್ಕೂಟರಿನಲ್ಲಿ ಪ್ರಯಾಣಿಸುತ್ತಾ ತನ್ನ ತೊಡೆಯ ಮೇಲೆ ಲ್ಯಾಪ್ಟಾಪ್ ಇರಿಸುತ್ತಾ ಆಫೀಸು ಕೆಲಸ ಮಾಡುತ್ತಾ ಹೋಗುತ್ತಿದ್ದಾನೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಬೆಂಗಳೂರಿನಲ್ಲಿ ನಡೆದ ದೃಶ್ಯ ಎಂದು ವೈರಲ್ ಆಗುತ್ತಿದೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಲಿಲ್ಲ. ಅದರಲ್ಲೂ ಟ್ರೋಲ್ ಪೇಜ್ಗಳು ಇದು ಬೆಂಗಳೂರಿನಲ್ಲಿ ನಡೆದ ಕತೆ ಎನ್ನುತ್ತಾ ಟ್ರೋಲ್ ಮಾಡುತ್ತಿದೆ.ಅಚ್ಚರಿ ಸಂಗತಿ ಎಂದರೆ ಸ್ಕೂಟಿ ಅಥವಾ ಬೈಕ್ನಲ್ಲಿ ಮೊಬೈಲ್ ಆಪರೇಟ್ ಮಾಡುತ್ತಾ ತೆರಳುವವರು ಬೆಂಗಳೂರಿನ ನಗರಗಳಲ್ಲಿ ಕಾಣಸಿಗುತ್ತಾರೆ. ಆದರೆ ಲ್ಯಾಪ್ಟಾಪ್ ತೊಡೆಯ ಮೇಲಿಟ್ಟುಕೊಂಡು ಮತ್ತೆರಡು ಕೈಯಲ್ಲಿ ಸ್ಕೂಟರ್ ಬಿಡುತ್ತಾ ಹೋಗ್ತಾರೆ ಅಂದ್ರೆ ನಂಬಲಸಾಧ್ಯ.
ಒಟ್ಟಿನಲ್ಲಿ ಮೊಬೈಲ್ ಬಳಸಿಕೊಂಡು, ಹೆಡ್ಫೋನ್ ಬಳಸಿಕೊಂಡು ಸಂಚಾರಿ ನಿಯಮ ಉಲ್ಲಂಘಿಸುವುದು ಅಪರಾಧ. ಆದರೆ ಈ ವ್ಯಕ್ತಿ ಲ್ಯಾಪ್ಟಾಪ್ ಆಪರೇಟ್ ಮಾಡುತ್ತಾ ಹೋಗುತ್ತಿದ್ದಾನೆ ಇದಕ್ಕೆ ಏನು ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದಕ್ಕೆ ಸದ್ಯ ಉತ್ತರ ಸಿಕ್ಕಿಲ್ಲ.