ನ್ಯೂಸ್ ನಾಟೌಟ್: ನಟಿ, ರಾಜಕಾರಣಿ ಖುಷ್ಬೂ ಸುಂದರ್ ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಕಳೆದ ವರ್ಷ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನೇಮಕಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ನಟಿ ತಮ್ಮ ಜೀವನದ ಕಹಿ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಬಹುತೇಕ ತಂದೆಯರಿಗೆ ಮಕ್ಕಳ ಮೇಲೆ ಪ್ರೀತಿ ಇರುತ್ತದೆ. ಆದರೆ, ಖಷ್ಬೂ ತಂದೆಗೆ ಮಗಳ ಮೇಲೆ ಇದ್ದಿದ್ದು ಕಾಮ ಎಂದು ಅವರು ಹೇಳಿದ್ದಾರೆ.
‘ಸಣ್ಣ ವಯಸ್ಸಿನಲ್ಲಿದ್ದಾಗ ಮಗುವಿನ ಮೇಲೆ ದೌರ್ಜನ್ಯ ನಡೆದರೆ ಆ ಕಹಿ ನೆನಪು ಕೊನೆಯವರೆಗೂ ಇರುತ್ತದೆ. ಅದು ಹುಡುಗನೇ ಆಗಿರಬಹುದು, ಹುಡುಗಿಯೇ ಆಗಿರಬಹುದು. ನನ್ನ ತಂದೆಯಿಂದ ನಾನು ಸಾಕಷ್ಟು ಕಿರುಕುಳ ಅನುಭವಿಸಿದ್ದೇನೆ. ಆತ ನನ್ನ ತಾಯಿಗೆ ಸಾಕಷ್ಟು ಹೊಡೆಯುತ್ತಿದ್ದ. ಹೆಂಡತಿಗೆ ಹಾಗೂ ಮಕ್ಕಳಿಗೆ ಹೊಡೆಯೋದು, ಮಗಳಿಗೆ ಲೈಂಗಿಕ ಕಿರುಕುಳ ನೀಡೋದು ಆತನ ಕೆಲಸ ಆಗಿತ್ತು.
ಅದನ್ನು ಅವನು ಜನ್ಮಸಿದ್ಧ ಹಕ್ಕು ಎಂದು ಭಾವಿಸಿದ್ದ’ ಎಂದು ಖುಷ್ಬೂ ಸುಂದರ್ ಹೇಳಿಕೊಂಡಿದ್ದರು. ಖುಷ್ಬೂ ಸುಂದರ್ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಆಗಿತ್ತು. ಆಗ ಅವರಿಗೆ 8 ವರ್ಷ ವಯಸ್ಸು. ವರ್ಷಗಳು ಕಳೆದಂತೆ ಖುಷ್ಬೂಗೆ ಇದೆಲ್ಲ ತಪ್ಪು ಎಂಬುದು ಅರಿವಾಗಲು ಆರಂಭ ಆಯಿತು. 15 ವರ್ಷ ಆಗುತ್ತಿದ್ದಂತೆ ಬಳಿಕ ತಂದೆಯ ವಿರುದ್ಧ ಮಾತನಾಡುವುದನ್ನು ಕಲಿತರು. ಈ ಮೂಲಕ ಎಲ್ಲವನ್ನೂ ಎದುರಿಸಿ ನಿಂತಳು ಎಂದು ಆಕೆ ಹೇಳಿಕೊಂಡಿದ್ದಾರೆ. ಖುಷ್ಬೂ ಅವರು ಕನ್ನಡದಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ. ‘ರಣಧೀರ’ ಅವರ ನಟನೆಯ ಮೊದಲ ಕನ್ನಡ ಸಿನಿಮಾ. ರವಿಚಂದ್ರನ್ ಜೊತೆ ನಟಿಸಿ ಅವರು ಫೇಮಸ್ ಆದರು. ಕನ್ನಡ ಮಾತ್ರವಲ್ಲದೆ, ತಮಿಳು, ಹಿಂದಿ ಮೊದಲಾದ ಭಾಷೆಗಳಲ್ಲಿ ನಟಿಸಿದ್ದಾರೆ.