ನ್ಯೂಸ್ ನಾಟೌಟ್: ಸಾಧನೆ ಸಣ್ಣದಿರಲಿ ಅಥವಾ ದೊಡ್ಡದಿರಲಿ ಅದನ್ನು ಗುರುತಿಸುವ ಕೆಲಸವಾದಾಗ ಖುಷಿಯಾಗುತ್ತದೆ. ಆತ್ಮವಿಶ್ವಾಸ ಇಮ್ಮಡಿಗೊಳ್ಳುತ್ತದೆ. ಅಂತೆಯೇ ಇಲ್ಲೊಬ್ಬ ಬಾಲ ಕಲಾವಿದೆಯನ್ನು ಅರೆಸಿಕೊಂಡು ಪ್ರಶಸ್ತಿಯೊಂದು ಬಂದಿದ್ದು ಹೆತ್ತವರಿಗೆ , ಊರಿಗೆ ಹೆಮ್ಮೆ ತರುವ ಕೆಲಸವಾಗಿದೆ.
ಈಕೆಯ ಹೆಸರು ಅವನಿ ಎಂ ಎಸ್ ಸುಳ್ಯ, ಯೋಗ ನೃತ್ಯ ಕಲಾವಿದೆಯಾಗಿ ಸಣ್ಣ ವಯಸ್ಸಿಗೆ ಹೆಸರು ಮಾಡಿದ್ದಾಳೆ. ಈಕೆಯ ಸಾಧನೆಯನ್ನು ಗುರುತಿಸಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಇವರು ಈಕೆಗೆ ಕಲಾ ಚೈತನ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ.
ಅವನಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ನೀರಬಿದಿರೆ ನಿವಾಸಿಗಳಾದ ಮೋಂಟಡ್ಕ ಶಶಿಧರ ಎಂ ಜೆ ಮತ್ತು ರೇಷ್ಮಾ ದಂಪತಿಗಳ ಪುತ್ರಿ. ಪ್ರಸ್ತುತ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ. ಅವನಿ ತನ್ನ 4ನೇ ವಯಸ್ಸಿನಿಂದ ಸುಗಮ ಸಂಗೀತವನ್ನು ಡಾ. ಕಿರಣ್ ಕುಮಾರ್ ಗಾನಸಿರಿ ಪುತ್ತೂರು, ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ವಿದುಷಿ ಕಾಂಚನಾ ಈಶ್ವರ ಭಟ್ ಇವರಿಂದ ತರಬೇತಿ ಪಡೆಯುತ್ತಿದ್ದಾಳೆ.
ಯೋಗಾಭ್ಯಾಸವನ್ನು ತನ್ನ 5ನೇ ವಯಸಿನಲ್ಲಿಯೇ ಯೋಗ ಗುರು ಸಂತೋಷ್ ಅವರಿಂದ ಕಲಿತು, ಪ್ರಸ್ತುತ ಯೋಗ ಗುರು ಶರತ್ ಮರ್ಗಿಲಡ್ಕರ ಜೊತೆ ಕಲಿಕೆ ಮುಂದುವರಿಸುತ್ತಿದ್ದಾರೆ. ಚಿತ್ರಕಲೆಯನ್ನು 1ನೇ ತರಗತಿಯಿಂದ ಕ್ರಿಯೇಟಿವ್ ಆರ್ಟ್ ಪ್ರಸನ್ನ ಐವರ್ನಾಡು ಇವರಿಂದ, ನೃತ್ಯವನ್ನು ಯುನೈಟೆಡ್ ಡಾನ್ಸ್ ಸ್ಟುಡಿಯೋ ಅಭಿ ಕುಲಾಲ್ ರವರಿಂದ ಪಡೆದಿದ್ದಾರೆ. ಚೆಸ್ ತರಬೇತಿಯನ್ನುನರೇಶ್ ಬಿ ಇವರಿಂದ ಪಡೆಯುತ್ತಿದ್ದಾರೆ. ಭರತನಾಟ್ಯವನ್ನು ಸುಜಾತ ಕಲಾಕ್ಷೇತ್ರ ಕೇರಳ ಅವರಿಂದ ಅಭ್ಯಾಸ ಮಾಡುತ್ತಿದ್ದಾರೆ.