ವರದಿ: ಹರ್ಷಿತಾ ವಿನಯ್
ನ್ಯೂಸ್ ನಾಟೌಟ್: ಇಡೀ ಜಗತ್ತಿಗೆ ಯೋಗದ ಕೊಡುಗೆ ನೀಡಿದ್ದೇ ಭಾರತ. ಇಂದು ನಮ್ಮ ಯೋಗ ಕಲೆಗೆ ವಿದೇಶಿಗರೂ ಕೂಡ ಮಾರು ಹೋಗಿದ್ದಾರೆ. ಇಂದಿನ ಆಧುನಿಕ ಪದ್ಧತಿಯ ಒತ್ತಡದ ಜೀವನದಿಂದ ಹೊರಗೆ ಬರೋದಕ್ಕೆ ಮನುಷ್ಯನಿಗೆ ಯೋಗವೇ ಸಿದ್ಧೌಷ. ಪ್ರತಿನಿತ್ಯ ಯೋಗಾಭ್ಯಾಸ ಮಾಡಿದ್ರೆ ಯಾವುದೇ ದೈಹಿಕ ಕಾಯಿಲೆಗಳು ಬಾಧಿಸಲ್ಲ ಅನ್ನೋದು ಎಷ್ಟು ಸತ್ಯವೋ ಮಾನಸಿಕ ಆರೋಗ್ಯ ಕೂಡ ಸ್ಥಿರವಾಗಿರುತ್ತೆ ಅನ್ನೋದು ಕೂಡ ಅಷ್ಟೇ ಸತ್ಯ. ಇಂತಹ ಯೋಗಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಕೆವಿಜಿ ಕ್ಯಾಂಪಸ್ ನಲ್ಲಿ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತಿದೆ.
ಹೌದು, ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಕೆವಿಜಿ ಕ್ಯಾಂಪಸ್ ನಲ್ಲಿ 5 ದಿನಗಳ ಯೋಗ ತರಬೇತಿ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದು ಆಯೋಜಿಸಲಾಗುತ್ತಿದೆ. ನೂರಾರು ಮಹಿಳೆಯರಿಗೆ ಉದ್ಯೋಗ ಕಲ್ಪಿಸಿ ಬದುಕಿಗೆ ಆಸರೆಯಾಗಿರುವ ಕೆವಿಜಿ ವಿದ್ಯಾ ಸಂಸ್ಥೆ ೫ ದಿನಗಳ ಕಾಲ ಉಚಿತವಾಗಿ ಯೋಗ ತರಬೇತಿಯನ್ನು ನೀಡಲು ಮುಂದಾಗಿದೆ. ಕೆವಿಜಿ ಮಹಿಳಾ ಉದ್ಯೋಗಿಗಳಿಗೆ ಮಾತ್ರ ಈ ಉಚಿತ ಯೋಗ ತರಬೇತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಸದ್ಯ ಯೋಗ ತರಬೇತಿಯು ಮಾರ್ಚ್ 1 ರಿಂದ ಮಾರ್ಚ್ 5 ರ ತನಕ ನಡೆಯಲಿದೆ. ಬೆಳಗ್ಗೆ 6.30 ರಿಂದ 7.30 ರವರೆಗೆ ಹಾಗೂ ಸಂಜೆ 5.30 ರಿಂದ 6.30 ರವೆರೆಗೆ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಧನ್ವಂತರಿ ಹಾಲ್ ನಲ್ಲಿ ಸಾಗಲಿದೆ. ವಿಶೇಷವಾಗಿ ಮಾರ್ಗದರ್ಶಿತ ಯೋಗ ಸೆಷನ್, ಪ್ರಾಣಾಯಾಮ ಹಾಗೂ ಧ್ಯಾನ ಇರಲಿದೆ. ಕೆ.ವಿ.ಜಿ ಮಹಿಳಾ ಸಿಬ್ಬಂದಿ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಈ ಭಾರಿಯ ಮಹಿಳಾ ದಿನಾಚರಣೆ ಬಹಳ ವಿಶೇಷವಾಗಿ ಮೂಡಿ ಬರಲಿದೆ.