ನ್ಯೂಸ್ ನಾಟೌಟ್ : ಮಹಿಳೆಯೊಬ್ಬಳು ಆಕೆ ಗಂಡನ ಶವದ ಜೊತೆ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ವರ್ಷ ಜೀವನ ನಡೆಸಿದ್ದಾಳೆ ಅಂದ್ರೆ ನೀವು ನಂಬ್ತಿರಾ? ಆಕೆ ಬೆಡ್ ಮೇಲೆಯೇ ಪತಿ ಶವ ಇಟ್ಟುಕೊಂಡಿದ್ದು,ವಿಷ್ಯ ಹೊರಗೆ ಹೇಳಿದ್ರೆ ಶಿಕ್ಷೆ ನೀಡೋದಾಗಿ ಬೆದರಿಕೆಯನ್ನೂ ಹಾಕಿದ್ದಳಂತೆ..!
50 ವರ್ಷದ ಸ್ವೆಟ್ಲಾನಾ ಎಂಬ ಮಹಿಳೆ ತನ್ನ ಪತಿ ವ್ಲಾಡಿಮಿರ್ನ ಮೃತ ದೇಹ (Dead Body) ವನ್ನು ತನ್ನ ಹಾಸಿಗೆಯಲ್ಲಿ ಇಟ್ಟುಕೊಂಡಿದ್ದಾಳೆ. 49 ವರ್ಷದ ವ್ಲಾಡಿಮಿರ್, ನಾಲ್ಕು ವರ್ಷಗಳ ಹಿಂದೆ ತನ್ನ ಇನ್ನೊಂದು ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ. ಆತನ ಶವವನ್ನು ಕಂಬಳಿಯಲ್ಲಿ ಸುತ್ತಿಕೊಂಡು ಬಂದಿದ್ದ ಸ್ವೆಟ್ಲಾನಾ, ತನ್ನ ಹಾಸಿಗೆ ಮೇಲೆ ಇಟ್ಟಿದ್ದಳು. ತಂದೆ ಶವದ ಬಗ್ಗೆ ಹೊರಗೆ ಮಾಹಿತಿ ನೀಡಿದ್ರೆ ನಿಮ್ಮನ್ನು ಅನಾಥಾಶ್ರಮದಲ್ಲಿ ಬಿಟ್ಟು ಬರೋದಾಗಿ ಮಕ್ಕಳಿಗೆ ಬೆದರಿಕೆಯನ್ನೂ ಹಾಕಿದ್ದಳಂತೆ. ಪತಿ ಮತ್ತೆ ಎದ್ದು ಬರ್ತಾನೆ ಎಂಬ ನಂಬಿಕೆ ಆಕೆಗಿತ್ತು. ಇಬ್ಬರು ಒಬ್ಬರನ್ನೊಬ್ಬರು ಪ್ರತಿ ದಿನ ನೋಡ್ಬಹುದು ಎನ್ನುವ ಕಾರಣಕ್ಕೆ ಶವವನ್ನು ಹಾಸಿಗೆ ಮೇಲೆಯೇ ಇಟ್ಟುಕೊಂಡಿದ್ದಾಳೆ.
ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತರು ಮನೆಗೆ ಬಂದಾಗ ವಿಷ್ಯ ಬಹಿರಂಗವಾಗಿದೆ. ಮನೆಯಲ್ಲಿ ಸ್ಲೆಟ್ಲಾನಾ, 17 ಮತ್ತು 8 ವರ್ಷದ ಇಬ್ಬರು ಹೆಣ್ಣುಮಕ್ಕಳು, 11 ವರ್ಷದ ಅವಳಿ ಗಂಡು ಮಕ್ಕಳ ಜೊತೆ ವಾಸವಾಗಿದ್ದಾಳೆ. ಹಿಂದೆ ಅಲ್ಲಿಗೆ ಬಂದಿದ್ದ ಸಾಮಾಜಿಕ ಕಾರ್ಯಕರ್ತರು ಬೆಡ್ ಮೇಲಿದ್ದ ಶವದ ಬಗ್ಗೆ ಗಮನ ಹರಿಸಿರಲಿಲ್ಲ.ಮತ್ತೆ ಹೇಗೋ ಅದನ್ನು ಪತ್ತೆ ಹಚ್ಚಿದ್ದಾರೆ.
ಪತಿ ಮೃತದೇಹ ಪಾದಕ್ಕೆ ಈಜಿಪ್ಟಿನ ಶಿಲುಬೆ ಹಾಕಲಾಗಿತ್ತು. ಮಹಿಳೆಯ ಮನೆಯು ಟ್ಯಾರೋ ಕಾರ್ಡ್ಗಳು, ತಾಯತಗಳು, ತಲೆಬುರುಡೆಗಳು ಮತ್ತು ಸತ್ತವರ ಪ್ರಾಚೀನ ಈಜಿಪ್ಟಿನ ದೇವರು ಅನುಬಿಸ್ನ ಸೇರಿದಂಯೆ ಹಲವಾರು ಚಿತ್ರ, ಅನೇಕ ನಿಗೂಢ ವಸ್ತುಗಳಿಂದ ತುಂಬಿತ್ತು ಎಂದು ವರದಿ ಮಾಡಲಾಗಿದೆ.ಸ್ವೆಟ್ಲಾನಾ ಪತಿ ವ್ಲಾಡಿಮಿರ್ ನಿಧನಕ್ಕಿಂತ ಮೊದಲು ಪತಿ – ಪತ್ನಿ ಮಧ್ಯೆ ಜಗಳ ನಡೆದಿತ್ತಂತೆ. ಈ ಸಮಯದಲ್ಲಿ ಕೋಪಗೊಂಡ ಪತ್ನಿ ಸ್ವೆಟ್ಲಾನಾ, ಸತ್ತೋಗು ಅಂತಾ ಶಾಪ ಹಾಕಿದ್ದಳು. ಆಕೆ ಬಾಯಿಂದ ಈ ವಿಷ್ಯ ಹೊರಗೆ ಬರ್ತಿದ್ದಂತೆ ವ್ಲಾಡಿಮಿರ್ ತಲೆ ಸುತ್ತಿ ಬಿದ್ದಿದ್ದ. ಅಲ್ಲಿಯೇ ಸಾವನ್ನಪ್ಪಿದ್ದ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸೂಕ್ತ ಕ್ರಮಕೈಗೊಂಡಿದ್ದಾರೆ.