ನ್ಯೂಸ್ ನಾಟೌಟ್: ಮೀಸಲು ಅರಣ್ಯದ ಬಳಿ ಇರುವ ಸೋಮವಾರಪೇಟೆ ತಾಲೂಕಿನ ಕಾಜೂರಿನ ರಾಜ್ಯ ಹೆದ್ದಾರಿಯಲ್ಲಿ ಮತ್ತೆ ಕಾಡಾನೆ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಠಿಸಿದ ಘಟನೆ ಫೆ.12 ರಂದು ನಡೆದಿದೆ.
ಕಾಡಾನೆಗಳು ಹಗಲಲ್ಲೇ ಸಂಚರಿಸುತ್ತಿರುವುದರಿಂದ ಅಲ್ಲಿರುವ ಜನರಿಗೆ ಸಂಚರಿಸಲು ಮತ್ತು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ ಎನ್ನಲಾಗಿದೆ. ಕೋವರ್ ಕೊಲ್ಲಿಯ ಟಾಟಾ ಕಾಫಿ ಸಂಸ್ಥೆಯ ತೋಟದಲ್ಲಿದ್ದ ಒಂಟಿ ಸಲಗವನ್ನು ಆರ್.ಆರ್.ಟಿ ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರು ಕಾಡಿಗಟ್ಟಲು ಮುಂದಾದ ಸಂದರ್ಭದಲ್ಲಿ ದಾಳಿ ಮಾಡಿದೆ.
ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಕಾಜೂರು ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ನಡೆದಿತ್ತು. ಸೋಮವಾರ ಬೆಳಗ್ಗೆ ಮತ್ತೆ ಕಾಜೂರಿನ ಆರ್.ಆರ್.ಟಿ ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರು ತಂಗಿರುವ ವಸತಿಗೃಹದ ಬಳಿಗೆ ಬಂದು ಮತ್ತೆ ಕಾಡಾನೆ ಕಾಣಿಸಿಕೊಂಡಿದೆ. ಕಾಡಾನೆ ಹಗಲಿನಲ್ಲಿಯೇ ಓಡಾಡುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಮತ್ತು ಕೂಲಿ ಕಾರ್ಮಿಕರು ಭಯದಿಂದಲೇ ಸಂಚರಿಸುತ್ತಿದ್ದಾರೆ.