ನ್ಯೂಸ್ ನಾಟೌಟ್:’ಅಘೋರಿ’ ಎನ್ನುವ ಶಬ್ಧ ಕೇಳುತ್ತಿದ್ದಂತೆ ಕಣ್ಣ ಮುಂದೆ ಒಂದು ವಿಚಿತ್ರ ರೂಪ ಹಾದುಹೋಗುತ್ತದೆ. ಈ ಅಘೋರಿಗಳನ್ನೇ ಸಾಧುಗಳೆಂದು ಕರೆಯಲಾಗುತ್ತದೆ. ಅಘೋರಿಗಳು ಸ್ಮಶಾನ ವಾಸಿಗಳು. ಇವರನ್ನು ಹೆಚ್ಚಾಗಿ ಸ್ಮಶಾನದಲ್ಲಿ ನೋಡಬಹುದು.ಅಘೋರಿಗಳ ನಿಗೂಢ ಪ್ರಪಂಚವನ್ನು ಎಷ್ಟು ಹೆಚ್ಚು ಪ್ರವೇಶಿಸುತ್ತೀರೋ ಅಷ್ಟು ಹೆಚ್ಚು ನಿಗೂಢತೆ ಮತ್ತು ರೋಮಾಂಚನಾಕಾರಿ ವಿಷಯಗಳನ್ನು ಪಡೆಯಬಹುದು.
ಇದೀಗ ಸ್ಮಶಾನವಾಸಿ ಅಘೋರಿಗಳು ಉಸಿರಿಲ್ಲದ ದೇಹಗಳನ್ನು ಪೂಜಿಸುವುದರ ಜೊತೆಗೆ ಅವುಗಳೊಂದಿಗೆ ದೈಹಿಕ ಸಂಬಂಧವನ್ನು ಹೊಂದುತ್ತಾರೆ ಅನ್ನೋ ವಿಷಯದ ಬಗ್ಗೆ ತಿಳಿದಿರಬಹುದು.ಇದೀಗ ಮತ್ತೊಂದು ಸ್ಪೋಟಕ ವಿಚಾರವೊಂದು ಬಯಲಿಗೆ ಬಂದಿದೆ. ಹೌದು, ಅಘೋರಿಗಳು ಕೂಡ ಸಂಭೋಗ ನಡೆಸುತ್ತಾರಂತೆ. ಆದರೆ ಅವರು ಮುಟ್ಟಾದ ಹೆಂಗಳೆಯರೊಂದಿಗೂ ಸಂಭೋಗಿಸುತ್ತಾರೆ ಎಂಬ ವಿಚಾರ ಹೊರ ಬಿದ್ದಿದೆ.
ಇದನ್ನು ಸ್ವತಃ ಅಘೋರಿಗಳೇ ಒಪ್ಪಿಕೊಂಡಿದ್ದಾರೆ. ಅಘೋರಿಗಳು ಪ್ರಕಾರ, ಉಸಿರು ಚೆಲ್ಲಿದ ದೇಹಗಳೊಂದಿಗೆ ದೈಹಿಕ ಸಂಬಂಧವನ್ನು ಹೊಂದುವುದು ಎಂದರೆ ಅದು ಶಿವ ಮತ್ತು ಶಕ್ತಿಯ ಆರಾಧನೆಯ ಒಂದು ರೂಪವಾಗಿದೆ. ಮೃತದೇಹದೊಂದಿಗೆ ದೈಹಿಕ ಚಟುವಟಿಕೆಯ ಸಮಯದಲ್ಲಿಯೂ ಮನಸ್ಸು ದೇವರ ಭಕ್ತಿಯಲ್ಲಿ ತೊಡಗಿದ್ದರೆ, ಇದಕ್ಕಿಂತ ಹೆಚ್ಚಿನ ಮಟ್ಟದ ಆಧ್ಯಾತ್ಮಿಕ ಅಭ್ಯಾಸ ಇನ್ನೊಂದಿಲ್ಲ ಎಂದು ಅವರು ನಂಬುತ್ತಾರೆ.
ಇತರ ಪಂಗಡಗಳ ಸಾಧುಗಳಂತೆ, ಅಘೋರಿಗಳು ಬ್ರಹ್ಮಚರ್ಯವನ್ನು ಅನುಸರಿಸುವುದಿಲ್ಲ. ಅಘೋರಿಗಳು ಬೂದಿ ಬಳಿದ ತಣ್ಣಗಿನ ಉಸಿರು ನಿಂತ ದೇಹದೊಂದಿಗೆ ದೈಹಿಕ ಸಂಪರ್ಕವನ್ನು ಮಾಡುತ್ತಾರೆ. ಮಂತ್ರಗಳನ್ನು ಪಠಿಸುತ್ತಾರೆ ಮತ್ತು ಡೋಲು ಬಾರಿಸುತ್ತಾರೆ. ದೈಹಿಕ ಸಂಬಂಧಗಳನ್ನು ಹೊಂದುವ ಈ ಕ್ರಿಯೆಯು ಸಾಧನದ ಒಂದು ಭಾಗವಾಗಿದೆ. ವಿಶೇಷವಾಗಿ ಮಹಿಳೆಯರು ಋತುಸ್ರಾವ ಹೊಂದುವ ಸಮಯದಲ್ಲಿ ಅವರು ದೈಹಿಕ ಚಟುವಟಿಕೆಗಳನ್ನು ಹೊಂದಲು ಬಯಸುತ್ತಾರೆ. ಹೀಗೆ ಮಾಡುವುದರಿಂದ ಅಘೋರಿಗಳ ಶಕ್ತಿ ಹೆಚ್ಚುತ್ತದೆ ಎನ್ನುವುದು ಅವರ ನಂಬಿಕೆಯಾಗಿದೆ.