ನ್ಯೂಸ್ ನಾಟೌಟ್: ಟಿವಿ ನಿರೂಪಕನೊಬ್ಬನನ್ನು ವಿವಾಹವಾಗುವ ಉದ್ದೇಶದಿಂದ ಅಪಹರಿಸಿದ ಆರೋಪದಲ್ಲಿ ಮಹಿಳಾ ಉದ್ಯಮಿಯೊಬ್ಬರನ್ನು ಬಂಧಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಸಂಗೀತ ಚಾನಲ್ ಎಂಬಲ್ಲಿಯ ನಿರೂಪಕನ ಚಲನವಲನಗಳನ್ನು ತಿಳಿದುಕೊಳ್ಳಲು ಮತ್ತು ಆತನನ್ನು ಹಿಂಬಾಲಿಸಲು ಆತನ ಕಾರಿಗೆ ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸಿದ್ದಳು ಎಂದು ಆರೋಪಿಸಲಾಗಿದೆ. ಸುಮಾರು 31 ವರ್ಷ ವಯಸ್ಸಿನ ಮಹಿಳೆ ಡಿಜಿಟಲ್ ಮಾರ್ಕೆಟಿಂಗ್ ವ್ಯವಹಾರವನ್ನು ನಡೆಸುತ್ತಿದ್ದು, ವೈವಾಹಿಕ ವೆಬ್ ಸೈಟ್ ನಲ್ಲಿ ಎರಡು ವರ್ಷ ಹಿಂದೆ ಟಿವಿ ನಿರೂಪಕನ ಫೋಟೊ ನೋಡಿದ್ದು, ಆತನ ಜತೆ ಚಾಟ್ ಮಾಡುತ್ತಿದ್ದಳು.
ಆದರೆ ಆ ವೈವಾಹಿಕ ಖಾತೆಯನ್ನು ಹೊಂದಿದ್ದ ವ್ಯಕ್ತಿ ತನ್ನ ಸ್ವಂತ ಫೋಟೊ ಬದಲಾಗಿ ಟಿವಿ ನಿರೂಪಕನ ಫೋಟೊ ಬಳಸಿದ್ದ ಎನ್ನುವುದು ಆಕೆಗೆ ಆ ನಂತರದಲ್ಲಿ ತಿಳಿಯಿತು. ಈಗ ಆಕೆ ಆತನನ್ನು ಬಿಟ್ಟು ಫೋಟೋದಲ್ಲಿದ್ದ ಟಿವಿ ನಿರೂಪಕನನ್ನು ಹುಡುಕಿ ಅವಳ ಹಿಂದೆ ಬಿದ್ದಿದ್ದಾಳೆ. ನಂತರ ಟಿವಿ ನಿರೂಪಕನ ಫೋನ್ ನಂಬರ್ ಹುಡುಕಿ, ಇನ್ಸ್ಟಂಟ್ ಮೆಸ್ಸೇಜಿಂಗ್ ಆ್ಯಪ್ ಮೂಲಕ ಸಂಪರ್ಕಿಸಿದ್ದಳು.
ವೈವಾಹಿಕ ವೆಬ್ ಸೈಟ್ ಖಾತೆಯಲ್ಲಿ ನನ್ನ ಫೋಟೊವನ್ನು ಬೇರೆಯವರು ಬಳಸಿದ್ದಕ್ಕೆ ದೂರು ನೀಡಲಾಗಿದೆ ಎಂದು ಮಹಿಳೆಗೆ ನಿರೂಪಕ ಹೇಳಿದ ಬಳಿಕ ಕೂಡಾ ಮೆಸೇಜ್ ಮುಂದುವರಿಸಿದ್ದಳು. ಆಕೆಯ ನಂಬರ್ ಬ್ಲಾಕ್ ಮಾಡಿದ ಬಳಿಕವೂ ಆತನನ್ನೇ ವಿವಾಹವಾಗಬೇಕು ಎಂಬ ಉದ್ದೇಶದಿಂದ ಅಪಹರಿಸಿದಳು ಎಂದು ಪೊಲೀಸರು ಹೇಳಿದ್ದಾರೆ. ನಾಲ್ಕು ಮಂದಿಯನ್ನು ಅಪಹರಣಕ್ಕೆ ಬಾಡಿಗೆಗೆ ಪಡೆದು ನಿರೂಪಕನ ಚಲನವಲನಗಳ ಮೇಲೆ ನಿಗಾ ಇಟ್ಟು ಅಪಹರಿಸಿದ್ದಳು ಎನ್ನಲಾಗಿದೆ.